Whatsapp ನಲ್ಲಿ ಹೊಸ ಫೀಚರ್ – ಶೀಘ್ರದಲ್ಲೇ ಸಿಗಲಿದೆ ಸ್ಟಿಕ್ಕರ್ ರಚನೆ ಆಯ್ಕೆ..!
ಜನಪ್ರಿಯ ಮೆಸೆಂಜರ್ ಆಪ್ FACEBOOK ( META) ಒಡೆತನದ Whatsapp ಇತ್ತೀಚೆಗೆ ಸಾಕಷ್ಟು ವಿಶೇಷತೆಗಳನ್ನ ಬಳಕೆದಾರರಿಗೆ ಪರಿಚಯಿಸಿದೆ.. ಸಾಕಷ್ಟು ಪ್ರಯೋಗಗಳನ್ನ ಮಾಡುತ್ತಿದೆ.. ಅಂತೆಯೇ
ಬಳಕೆದಾರರು ಕಳುಹಿಸುವ ಫೋಟೊಗಳನ್ನು ಸ್ಟಿಕರ್ಗಳಾಗಿ ಪರಿವರ್ತಿಸುವ ಆಯ್ಕೆಯನ್ನು ಕೂಡ ಈಗ Whatsapp ಶೀಘ್ರದಲ್ಲಿಯೇ ಒದಗಿಸಲಿದೆ. ಬೀಟಾ ಆವೃತ್ತಿಯಲ್ಲಿ ನೂತನ ಆಯ್ಕೆಯನ್ನು ವಾಟ್ಸ್ಆ್ಯಪ್ ಪರಿಶೀಲಿಸುತ್ತಿದೆ.
ವಾಟ್ಸ್ಆ್ಯಪ್ ಮೂಲಕ ಈಗ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಸ್ಟಿಕರ್ ರಚಿಸಿ ಕಳುಹಿಸುತ್ತಿದ್ದಾರೆ. ಮುಂದೆ ವಾಟ್ಸ್ಆ್ಯಪ್ ತನ್ನದೇ ಆದ ಸ್ಟಿಕರ್ಸ್ ರಚಿಸುವ ಆಯ್ಕೆಯನ್ನು ಒದಗಿಸಲಿದೆ. ಹಲವು ಥರ್ಡ್ ಪಾರ್ಟಿ ಆ್ಯಪ್ ಬಳಕೆಯಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯ ಆತಂಕವಿದೆ.
ಅಲ್ಲದೆ, ಸ್ಟಿಕರ್ ರಚನೆಗಾಗಿ ಪ್ರತ್ಯೇಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಬಳಸಬೇಕಿದೆ. ಅದಕ್ಕಾಗಿ ವಾಟ್ಸ್ಆ್ಯಪ್ ತನ್ನದೇ ಆದ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.. ಈ ಮೂಲಕ ಪ್ರೈವೆಸಿ ಹಾಗೂ ಸೆಫ್ಟಿಗೆ ಮತ್ತೊಂದು ಕ್ರಮ ಕೈಗೊಳ್ತಿದೆ..