tekki suicide
ಹೈದ್ರಾಬಾದ್ : ಧನದಾಹಿ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಐದು ಲಕ್ಷ ವರದಕ್ಷಿಣೆ ಕೊಟ್ಟರೂ, ಮತ್ತೂ 12 ಲಕ್ಷಕ್ಕೆ ಬೇಡಿಕೆ ಇಟ್ಟ ಗಂಡನ ಮನೆಯ ಹಣದಾಸೆಗೆ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ 24 ವರ್ಷದ ಕೃಷ್ಣಪ್ರಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಷ್ಟು ವಿಷಾದಕರ ಸಂಗತಿಯಂದ್ರೆ ಆತ್ಮಹತ್ಯೆಗೆ ಶರಣಾದ ಪ್ರಿಯ ಗರ್ಭಿಣಿಯಾಗಿದ್ದರು.
ಕಳೆದ ಜೂನ್ ನಲ್ಲಿ ಶ್ರವಣ್ ಕುಮಾರ್ ಎಂಬಾತನೊಂದಿಗೆ ಜತೆ ಕೃಷ್ಣಪ್ರಿಯಾ ಮದುವೆಯಾಗಿತ್ತು. ಜಿಮ್ ಟ್ರೈನರ್ ಆಗಿದ್ದ ಶ್ರವಣ್‌ಮನೆಯವರಿಗೆ ಮದುವೆ ಸಂದರ್ಭದಲ್ಲಿ ಪ್ರಿಯಾ ಪಾಲಕರು 5 ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು. ಆದರೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೆಚ್ಚುವರಿಯಾಗಿ 12 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಐದು ತಿಂಗಳ ಗರ್ಭಿಣಿಯಾಗಿದ್ದ ಕೃಷ್ಣಪ್ರಿಯಾ ಅವರ ಸೀಮಂತ ಮಾಡುವುದಾದರೆ ಚಿನ್ನ ತರುವಂತೆ ಗಂಡ ಹಾಗೂ ಆತನ ಮನೆಯವರು ಬೇಡಿಕೆ ಒಡ್ಡಿದ್ದರು. ಇದರಿಂದ ನೊಂದ ಕೃಷ್ಣಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಮನೆಯಲ್ಲಿ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಿಯಾ ಪೋಷಕರು ಹೆಚ್ಚುವರಿ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದಾರೆ. ಪೋಷಕರ ಆರೋಪ ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು ಗಂಡ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರೇ ನಿಜವಾದ ಕೊರೊನಾ ವಾರಿಯರ್ಸ್ : ಬೊಮ್ಮಾಯಿ
tekki suicide
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel