Telangana : ಮಹಿಳೆಯ ಹೊಟ್ಟೆಯಲ್ಲಿತ್ತು 8 ಕೆ ಜಿ ತೂಕದ ಗಡ್ಡೆ – ಹೊರತೆಗೆದ ವೈದ್ಯರು…
ತೆಲಂಗಾಣದ ಖಾಸಗಿ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಶಶಿರೇಖಾ ಎಂಬ ಮಹಿಳೆ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಶ್ರೀ ಸ್ವಾತಿ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಅವರ ಪ್ರಾಣ ಉಳಿಸಿದ್ದಾರೆ.
ಪೊನ್ನೆಬೋಯಿನಾ ಶ್ರೀನಿವಾಸ್ ಮತ್ತು ಅವರ ಪತ್ನಿ ಶಶಿರೇಖಾ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ನಿವಾಸಿಗಳು. ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಶಶಿರೇಖಾ ಅವರು ಸಮೀಪದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ನೋವಿನಿಂದ ಮುಕ್ತಿ ಸಿಕ್ಕಿರಲಿಲ್ಲ.
ಕೊನೆಗೆ ದಂಪತಿಗಳು ಸೂರ್ಯಪೇಟೆಯ ಖಾಸಗಿ ಆಸ್ಪತ್ರೆಯ ಶ್ರೀ ಸ್ವಾತಿ ಆಸ್ಪತ್ರೆ ಕಡೆ ಹೆಜ್ಜೆ ಹಾಕಿದ್ದಾರೆ. ಅಲ್ಲಿ ವೈದ್ಯರು ಮಹಿಳೆಯನ್ನ ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಹಚ್ಚಿದ್ದಾರೆ. ಆನಂತರ ತಾಸುಗಟ್ಟಲೆ ಶ್ರಮಪಟ್ಟು ಆಪರೇಷನ್ ಮಾಡಿದ ವೈದ್ಯರು ಶಶಿರೇಖಾ ಅವರ ಹೊಟ್ಟೆಯಲ್ಲಿದ್ದ 7-8 ಕೆಜಿ ತೂಕದ ಗೆಡ್ಡೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಹೊಟ್ಟೆ ನೋವಿಗೆ ಪರಿಹಾರ ಸಿಕ್ಕುರುವುದಗಿ ಮಹಿಳೆ ಹೇಳಿದ್ದಾಳೆ.
ಶಶಿರೇಖಾ ಮತ್ತು ಅವರ ಕುಟುಂಬದವರು ಶಸ್ತ್ರಚಿಕಿತ್ಸೆಗಾಗಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Telangana: 8 kg tumor was found in woman’s stomach – doctors removed it…