ಮಹಿಳಾ ಪ್ರತಿಭಟನಾಕಾರರನ್ನು ನಾಯಿಗಳು ಎಂದ ತೆಲಂಗಾಣ ಸಿಎಂ : ಕ್ಷಮೆಯಾಚನೆಗೆ ಪ್ರತಿಪಕ್ಷ ನಾಯಕರ ಒತ್ತಾಯ..!
ತೆಲಂಗಾಣ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಇತ್ತೀಚೆಗೆ ಮಹಿಳಾ ಪ್ರತಿಭಟನಾಕಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಹಿಳಾ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದು, ಸಿಎಂ ವರ್ತನೆಗೆ ವಿಪಕ್ಷಗಳು ಕೆಂಡ ಕಾರುತ್ತಿವೆ.
ನಾಗಾರ್ಜುನ್ ಸಾಗರದ ಬಳಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಹಲವು ಮಹಿಳೆಯರು ಮನವಿ ಪತ್ರವೊಂದನ್ನು ಸಲ್ಲಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಇದರಿಂದ ಕೋಪಗೊಂಡ ಸಿಎಂ, ಮನವಿ ಪತ್ರವನ್ನು ಸಲ್ಲಿಸಿದ್ದೀರಿ ಅಂದ ಮೇಲೆ ಪ್ರತಿಭಟನೆಯನ್ನು ಇಲ್ಲಿಗೆ ಬಿಟ್ಟು, ಸುಮ್ಮನೇ ಕುಳಿತುಕೊಳ್ಳಿ. ನಿಮ್ಮ ಮೂರ್ಖತನದ ನಡವಳಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಅನಗತ್ಯವಾಗಿ ಹಲ್ಲೆಗೊಳಗಾಗುತ್ತೀರಿ ಅಷ್ಟೇ. ನಿಮ್ಮಂಥ ಶ್ವಾನಗಳು ಸಾಕಷ್ಟಿವೆ. ಇಂತಹ ಎಷ್ಟೋ ಜನರನ್ನು ನಾನು ನೋಡಿದ್ದೇನೆ ಎಂದು ಗುಡುಗಿದ್ದಾರೆ.
ಚಂದ್ರಶೇಖರ್ ಅವರ ಇಂತಹ ಅನಾಗರೀಕ ರೀತಿಯಾದ ವರ್ತನೆಗೆ ಇದೀಗ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ನಾಯಕರು ಕೆಂಡ ಕಾರುತ್ತಿದ್ದಾರೆ. ವಿಪಕ್ಷ ಟಿಎಂಸಿಸಿ ನಾಯಕ ಮಣಿಕ್ಕಮ್ ಟಾಗೋರ್ ಅವರು ಸಹ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಚಂದ್ರಶೇಖರ್ ರಾವ್, ಪ್ರಜಾಪ್ರಭುತ್ವ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಮಹಿಳೆಯರನ್ನು ಶ್ವಾನ ಎಂದು ಕರೆದು ಅವಮಾನ ಮಾಡುತ್ತಿದ್ದಾರೆ. ಮೊದಲು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೆ ಸದ್ದು ಮಾಡಿದ `ಹೌದೋ ಹುಲಿಯಾ’..!
ರಾಜಕೀಯ ಕಾರಣಕ್ಕೆ ಮೀಸಲಾತಿ ನಾಟಕ ಬೇಡ : ಸ್ವಪಕ್ಷದವರ ವಿರುದ್ಧ ಡಿವಿಎಸ್ ಕಿಡಿ
“ಹೂ ಈಸ್ ಈಶ್ವರಪ್ಪ, ಅವ್ರ ಸರ್ಟಿಫಿಕೇಟ್ ಬೇಕಿಲ್ಲ : ಸಿದ್ದರಾಮಯ್ಯ ಟಾಂಗ್
ಅಂದು ಅಹಿಂದ, ಇಂದು ಹಿಂದ : `ತಂತ್ರ’ರಾಮಯ್ಯನ ಹೊಸ ಆಟ ಶುರು
ಬುಲೆಟ್ ಪ್ರಿಯರಿಗೆ ಶಾಕ್ : ರಾಯಲ್ ಎನ್ ಫೀಲ್ಡ್ ಬೆಲೆ ಹೆಚ್ಚಳ ಸಾಧ್ಯತೆ..!
ಫೆಬ್ರವರಿ 15 ರಿಂದ ದೇಶಾದ್ಯಂತ `FASTAG’ ಕಡ್ಡಾಯ
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
ಉತ್ತರಕಾಂಡ್ ನಲ್ಲಿ ಹಿಮಕುಸಿತ : 34 ಮಮದಿ ಸಾವು , 204 ಮಂದಿ ನಾಪತ್ತೆ, ಇಬ್ಬರ ರಕ್ಷಣೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel