Indian techie shot dead | ಅಮೆರಿಕಾದಲ್ಲಿ ಭಾರತದ ಟೆಕ್ಕಿ ಹತ್ಯೆ..

1 min read
telangana-techie-shot-dead saaksha tv

telangana-techie-shot-dead saaksha tv

Indian techie shot dead | ಅಮೆರಿಕಾದಲ್ಲಿ ಭಾರತದ ಟೆಕ್ಕಿ ಹತ್ಯೆ..

ವಾಷಿಂಗ್ಟನ್: ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬೊಲ್ಟಿಮೋರ್ ನಗರದಲ್ಲಿ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಆತನ ವಾಹನದಲ್ಲೇ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ.

26 ವರ್ಷದ ನಕ್ಕಾ ಸಾಯಿ ಚರಣ್ ಮೃತ ವ್ಯಕ್ತಿಯಾಗಿದ್ದಾರೆ.

ಚರಣ್ ನಿವೃತ್ತ ಶಾಲಾ ಶಿಕ್ಷಕರ ಮಗನಾಗಿದ್ದು, 4 ವರ್ಷಗಳ ಹಿಂದೆ ತನ್ನ ಸ್ನಾತಕೋತ್ತರ ಪದವಿಗಾಗಿ ಯುನೈಟೆಡ್ ಸ್ಟೇಟ್‌ಗೆ ತೆರಳಿದ್ದರು.

telangana-techie-shot-dead  saaksha tv
telangana-techie-shot-dead saaksha tv

ನಂತರ ಬಾಲ್ಟಿಮೋರ್ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದಿದ್ದರು.

ಕಳೆದ ಎರಡು ವರ್ಷಗಳಿಂದ ಚರಣ್ ಬಾಲ್ಟಿಮೋರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.  

ಗಾಯಗಳೊಂದಿಗೆ ಕಾರಿನಲ್ಲಿ ಮಲಗಿದ್ದ ಚರಣ್ ಅವರನ್ನು ಆರ್ ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್ ಗೆ ರವಾನಿಸಿದ್ದರು.

ಆದ್ರೆ ಅವರ ತಲೆಗೆ ಗುಂಡೇಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd