ಟಾಲಿವುಡ್ ನ ಸೂಪರ್ ಹಿಟ್ ಸಿನೆಮಾ ಆದ ಅಲಾ ವೈಕುಂಟಪುರಂಲೋ ಸಿನೆಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಆಗಿದ್ದ ಜೊತೆಗೆ ಚಿತ್ರದಲ್ಲಿ ನಾಯಕ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗಡೆಯ ಕೆಮಿಸ್ಟ್ರಿ ಹೊಸದೊಂದು ಕ್ರೇಜ್ ಕ್ರಿಯೇಟ್ ಮಾಡಿತ್ತು. ಅದ್ರಲ್ಲೂ ಬುಟ್ಟಬೊಮ್ಮ ಸಾಂಗ್ ಅಂತೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು, ಅಲ್ಲುಅರ್ಜುನ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ರು. ಚಿತ್ರದ ಸ್ಟೋರಿಯನ್ನೂ ಸಹ ಜನರು ಅಷ್ಟೇ ಮೆಚ್ಚಿದ್ರು. ಇದೀಗ ತೆಲುಗಿನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಈ ಚಿತ್ರ ಬಾಲಿವುಡ್ ಗೆ ರಿಮೇಕ್ ಆಗ್ತಿದೆ.
ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ನಟನೆಯ ಚಿತ್ರ ಹಿಂದೆಗೆ ರೀಮೇಕ್ ಆಗ್ತಿದೆ. ಅಷ್ಟೇ ಅಲ್ಲ ಈ ಚಿತ್ರಕ್ಕೆ ಮತ್ತೊಂದು ವಿಶೇಷತೆ ಇದೆ. ಬಾಲಿವುಡ್ ನಲ್ಲಿ ಮೂಡಿಬರಲಿರುವ ಈ ಚಿತ್ರವನ್ನು ಸ್ವತಃ ಅಲ್ಲು ಅರ್ಜುನ್ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನೂ ಬಾಲಿವುಡ್ ಗೆ ಈ ಚಿತ್ರ ರೀಮೇಕ್ ಆಗ್ತಿದೆ ಅಂದ ತಕ್ಷಣವೇ ಅಲ್ಲು ಅರ್ಜುನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗೋದು ಸಹಜ. ಯಾಕಂದ್ರೆ ಅಲ್ಲು ಅರ್ಜುನ್ ಅವರು ತಮ್ಮ ಡಿಫರೆಂಟ್ ಆಟಿಟ್ಯೂಡ್ ಹಾಗೂ ನಟನೆಗೆ ಫೇಮಸ್ ಅವರ ಪಾತ್ರವನ್ನು ಅವರಷ್ಟೇ ಅಚ್ಚಕಟ್ಟಾಗಿ ನಿಭಾಯಿಸುವವರು ಬೇಕು. ಹೀಗಿರುವಾಗ ಸಹಜವಾಗಿಯೇ ಕುತೂಹಲ ಇದ್ದೇ ಇರುತ್ತೆ.
ಇದೀಗ ಈ ಕುತೂಹಲಕ್ಕೂ ತೆರೆ ಬಿದ್ದಿದ್ದು, ಪ್ಯಾರ್ ಕಾ ಪಂಚ್‌ನಾಮಾ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಕಾರ್ತಿಕ್ ಆರ್ಯನ್ ಅವರು ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕೊರೊನಾ ಆತಂಕ ಕೊಂಚ ಸುಧಾರಿಸಿದ ಬಳಿಕ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟಿಸಲು ಕಾರ್ತಿಕ್ ಆರ್ಯನ್ ಅವರು ಬರೋಬ್ಬರಿ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾಗೆ ರೋಹಿತ್ ಧವನ್ ಆಕ್ಷನ್ ಕಟ್ ಹೇಳಲಿದ್ದು, ಮುಖ್ಯ ನಿರ್ಮಾಣದ ಜವಾಬ್ದಾರಿಯನ್ನು ಏಕ್ತಾ ಕಪೂರ್ ಹಾಗೂ ಅಲ್ಲು ಅರ್ಜುನ್ ಹೊತ್ತಿದ್ದಾರೆ.








