Test Championship : WTC ಫೈನಲ್ ತಲುಪಿದ ಭಾರತ – ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾಗೆ ಸೋಲು…
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಶ್ರೀಲಂಕ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಿಂದ ಹೊರಬಿದ್ದಿದ್ದು, ಭಾರತ ಸುಲಭವಾಗಿ WTC ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.
ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಪೈನಲ್ ತಲುಪಲು ಆಸ್ಟ್ರೇಲಿಯ ವಿರುದ್ಧದ ಅಹಮದಾಬಾದ್ ಟೆಸ್ಟ್‌ನಲ್ಲಿ ಗೆಲ್ಲುವ ಒತ್ತಡಕ್ಕೆ ಬಿದ್ದಿತ್ತು. ಆದರೇ ಇದೀಗ ಭಾರತದ ಹಾದಿ ಶ್ರೀಲಂಕ ಸೋಲುವುದುರೊಂದಿಗೆ ಸುಲಭವಾಗಿದ್ದು, ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತರೂ WTC ಫೈನಲ್ ತಲುಪಲಿದೆ. ಇದೀಗ ಭಾರತ ಇಂಗ್ಲೆಂಡ್ ನ ಓವಲ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿಯ ಫೈನಲ್ ಪಂದ್ಯವನ್ನ ಆಡಲಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಸೋಲು ಭಾರತಕ್ಕೆ ಲಾಭ ತಂದು ಕೊಟ್ಟಿದೆ. ಪಾಯಿಂಟ್ ಪಟ್ಟಿಯಲ್ಲಿ ಶೇ.48.48 ಅಂಕ ಪಡೆದ ಸಿಂಹಳಿಯರು ಮುಂದಿನ ಪಂದ್ಯವನ್ನ ಗೆದ್ದರೂ ಭಾರತಕ್ಕಿಂತ ಹೆಚ್ಚಿನ ಅಂಕಗಳನ್ನ ಹೊಂದಲು ಸಾಧ್ಯವಿಲ್ಲ. ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋತರೂ 56.94% ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರಲಿದೆ. ಇಂದೋರ್ ಟೆಸ್ಟ್‌ನಲ್ಲಿ ಗೆದ್ದ ನಂತರ ಆಸ್ಟ್ರೇಲಿಯಾ ಡಬ್ಲ್ಯುಟಿಸಿಯ ಫೈನಲ್ ಗೆ ತನ್ನ ಸ್ಥಾನವನ್ನ ಖಚಿತಪಡಿಕೊಂಡಿದೆ. ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಆಸೀಸ್ ಅಗ್ರಸ್ಥಾನದಲ್ಲಿದೆ.
ಭಾರತಕ್ಕೆ ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಆಡುತ್ತಿದೆ. ಮೊದಲ ಭಾರಿಗೆ ನ್ಯೂಜಿಲೆಂಡ್ ವಿರುದ್ಧ ಸೋಲನ್ನ ಎದುರಿಸಬೇಕಾಯಿತು.
ಓವಲ್ ನಲ್ಲಿ WTC ಫೈನಲ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಲಂಡನ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 7 ರಿಂದ 11 ರವರೆಗೆ ನಡೆಯಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಸೀಸನ್. ಮೊದಲ ಋತುವಿನಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ ಚಾಂಪಿಯನ್ ಆಗಿತ್ತು. ಸೌತಾಂಪ್ಟನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್ ತಂಡ ಭಾರತವನ್ನು 8 ವಿಕೆಟ್ ಗಳಿಂದ ಸೋಲಿಸಿತು.
Test Championship: India reached the WTC final – Sri Lanka lost against New Zealand…