ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಅದರಂತೆ ಕ್ರೀಸ್ ಗಿಳಿದ ಕೊಹ್ಲಿ ಪಡೆಗೆ ಕಿವೀಸ್ ಬೌಲರ್ ಗಳು ಶಾಕ್ ನೀಡಿದ್ರು. ಓಪನರ್ ಗಳಾದ ಪೃಥ್ವಿ ಶಾ ಕೇವಲ 16 ರನ್ ಗೆ ಔಟ್ ಆದ್ರೆ, ಮಯಾಂಕ್ ಅಗರ್ ವಾಲ್ 34 ರನ್ ಗಳಿಸಿ ಔಟ್ ಆದ್ರು. ಚೇತೇಶ್ವರ ಪೂಜಾರ (11), ಕ್ಯಾಪ್ಟನ್ ವಿರಾಟ್ ಕೊಹ್ಲಿ (2), ಹನುಮ ವಿಹಾರಿ (7) ಕ್ರೀಸ್ ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಇನ್ನು ಜಸ್ಟ್ 16 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ಭಾರತ 101 ರನ್ ಕಲೆ ಹಾಕುವ ಹೊತ್ತಿಗೆ 5 ವಿಕೆಟ್ ಗಳನ್ನ ಕಳೆದುಕೊಂಡಿತ್ತು. ಅದರಲ್ಲೂ ಚೇತೇಶ್ವರ ಪೂಜಾರಾ ಹಾಗೂ ಕೊಹ್ಲಿ ಔಟ್ ಆಗಿರುವುದು ತಂಡಕ್ಕೆ ಸಂಕಷ್ಟ ತಂದಿಟ್ಟಿದೆ.
ಅತೀ ಕಿರಿಯ ವಯಸ್ಸಿನಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದ ತಿಲಕ್ ವರ್ಮಾ
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಆಟಗಾರ ತಿಲಕ್ ವರ್ಮಾ ದಾಖಲೆಯ ಶತಕ ಸಿಡಿಸಿ, ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ...