ಪಠ್ಯ ಪರಿಷ್ಕರಣೆ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

1 min read
Text revision: Siddaramaiah vs karnataka BJP Saaksha Tv

Text revision: Siddaramaiah vs karnataka BJP Saaksha Tv

ಪಠ್ಯ ಪರಿಷ್ಕರಣೆ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದಾಗ ಮೈಸೂರು ರಾಜವಂಶಸ್ಥರ​ ಕುರಿತ ಪಾಠವನ್ನು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಆ ಪಾಠವನ್ನು ತೆಗೆದು ಕಿತ್ತುಹಾಕಿತು.ಏನಿದರ ಉದ್ದೇಶ ಸಿದ್ದರಾಮಯ್ಯ ಅವರೇ ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.

Text revision: Siddaramaiah vs karnataka BJP Saaksha Tv
Text revision: Siddaramaiah vs karnataka BJP Saaksha Tv

ಪಠ್ಯ ಪರಿಷ್ಕರಣೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟೀಕೆ ಮುಂದುವರೆಸಿದ್ದು, ಕನ್ನಂಬಾಡಿ ಕಟ್ಟೆ, ಶಿಕ್ಷಣ ಸಂಸ್ಥೆ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಿದ ಮೈಸೂರು ಮಹಾರಾಜರ ಪಠ್ಯಕ್ಕೆ ಜಾಗವಿಲ್ಲ. ಹಿಂದೂಗಳ ಮಾರಣ ಹೋಮ ಮಾಡಿ, ಕನ್ನಡದ ಬದಲಾಗಿ ಪರ್ಷಿಯನ್ ಭಾಷೆ  ಹೇರಿದ ಮತಾಂಧ ಟಿಪ್ಪುವಿನ ಬಗ್ಗೆ ಆರು ಪುಟದ ಪಠ್ಯ. ಅಲ್ಪಸಂಖ್ಯಾತರ ಓಲೈಕೆಯೇ ಸಿದ್ದರಾಮಯ್ಯ ಗುರಿಯಾಗಿತ್ತೇ?

ಕರುನಾಡಿನ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಪಾತ್ರ ಅದ್ವಿತೀಯ. ನಾಡನ್ನು ಕಟ್ಟಿ ಬೆಳೆಸಿದ ಮಹಾರಾಜರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಏಕವಚನದಲ್ಲಿ ಸಂಬೋಧಿಸಿ ಅವಮಾನ ಮಾಡಿದ್ದರು. ಅದೇ ಕೀಳು ಅಭಿರುಚಿ ಪಠ್ಯಪುಸ್ತಕದಲ್ಲೂ ವ್ಯಕ್ತಪಡಿಸಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದಾಗ ಮೈಸೂರು ರಾಜವಂಶಸ್ಥರ​ ಕುರಿತ ಪಾಠವನ್ನು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲಾಗಿತ್ತು.ಆದರೆ ಸಿದ್ದರಾಮಯ್ಯ ಸರ್ಕಾರ ಆ ಪಾಠವನ್ನು ತೆಗೆದು ಕಿತ್ತುಹಾಕಿತು.ಏನಿದರ ಉದ್ದೇಶ ಸಿದ್ದರಾಮಯ್ಯ ಅವರೇ?

ನಾಡ ದೇವಿ ಚಾಮುಂಡೇಶ್ವರಿ, ದಸರಾ ಉತ್ಸವ ಲೋಕ ವಿಖ್ಯಾತ. ಭಾರತದ ಭವ್ಯ ಪರಂಪರೆಯ ದ್ಯೋತಕ. ಸಿದ್ದರಾಮಯ್ಯನವರೇ, ಮೈಸೂರಿನ ಈ ಸಾಂಸ್ಕೃತಿಕ ವೈಭವ ಟಿಪ್ಪುವನ್ನು ಮಸುಕು ಮಾಡುತ್ತದೆ ಎಂಬ ಕಾರಣಕ್ಕಾಗಿ ಚಾಮುಂಡೇಶ್ವರಿ ಹಾಗೂ ಮೈಸೂರು ಒಡೆಯರ ಪಾಠಕ್ಕೆ ಕತ್ತರಿ ಹಾಕಿದ್ದೇ ಎಂದು ಬಿಜೆಪಿ ಪ್ರಶ್ನೆಗಳನ್ನು ಮಾಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd