Thailand nursery : ಮಕ್ಕಳ ನರ್ಸರಿ ಮೇಲೆ ಗುಂಡಿನ ದಾಳಿ – ಮಕ್ಕಳು ಸೇರಿ 36 ಮಂದಿ ಸಾವು…
ಗುರುವಾರ ಥಾಯ್ಲೆಂಡ್‌ನ ಮಕ್ಕಳ ಆರೈಕೆ ಕೇಂದ್ರದ ಮೇಲೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 24 ಮಕ್ಕಳು ಸೇರಿದಂತೆ 36 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ದಾಳಿಕೋರ ತನ್ನ ಕುಟುಂಬದವರನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿಗಳ ಪ್ರಕಾರ, ಉತ್ತರ ಪ್ರಾಂತ್ಯದ ನೊಂಗ್ಬುವಾ ಲ್ಯಾಂಫುದಲ್ಲಿ ಗುಂಡಿನ ದಾಳಿ ನಡೆದಿದೆ. ಮಾಜಿ ಪೊಲೀಸ್ ಅಧಿಕಾರಿ ಪನ್ಯಾ ಖಮ್ರಾಬ್ (34) ದಾಳಿಕೋರ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನ ವಜಾಗೊಳಿಸಲಾಗಿತ್ತು. ಮಕ್ಕಳ ಆರೈಕೆ ಕೇಂದ್ರದಲ್ಲಿ ಗುಂಡು ಹಾರಿಸಿಕೊಂಡು ಖಮ್ರಾಬ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ಆತ ತನ್ನ ಪತ್ನಿ ಮತ್ತು ಮಗನನ್ನ ಕೊಂದಿದ್ದಾನೆ.
ನರ್ಸರಿ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ದಾಳಿಕೋರ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಎರಡು ವರ್ಷದ ಮಗು ಮತ್ತು ಗರ್ಭಿಣಿಯೂ ಸಾವನ್ನಪ್ಪಿದ್ದಾರೆ.
Thailand nursery : Shooting at child daycare center in Thailand kills at least 34, including children