ಚೀನಾಗೆ ಮುಖಭಂಗ : ಚೀನಾದ ಹೆಸರನ್ನೇ ಅಳಿಸಿ ಹೊಸ ಪಾಸ್ ಪೋರ್ಟ್ ತಂದ ತೈವಾನ್

1 min read

ಚೀನಾಗೆ ಮುಖಭಂಗ : ಚೀನಾದ ಹೆಸರನ್ನೇ ಅಳಿಸಿ ಹೊಸ ಪಾಸ್ ಪೋರ್ಟ್ ತಂದ ತೈವಾನ್

ತೈವಾನ್ : ತೈವಾನ್ ದೇಶ ಹೊಸ ಪಾಸ್ ಪೋರ್ಟ್ ಬಿಡುಗಡೆ ಮಾಡಿದೆ. ಚೀನಾದ ಹೆಸರನ್ನ ತೆಗೆದುಹಾಕಲಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ತೈವಾನ್ ನನ್ನು ಚೀನಾ ಎಂಬುದಾಗಿ ತಪ್ಪಾಗಿ ಭಾವಿಸಲು ಅವಕಾಶ ನೀಡುವ ಗೊಂದಲವನ್ನು ನಿವಾರಿಸುವುದು ಚೀನಾದ ಹೆಚ್ಚುತ್ತಿರುವ ಆಕ್ರಮಣಶೀಲತೆಯನ್ನು ಕೊನೆಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತೈವಾನ್ ಹೇಳಿದೆ.

ಇನ್ಮುಂದೆ ಬಾರತ ‘ಲಿಥಿಯಂ’ಗಾಗಿ ಚೀನಾವನ್ನ ಅವಲಂಭಿಸುವ ಅಗತ್ಯವಿಲ್ಲ..!

ಆರಂಭಿಕ ಕೊರೋನ ವೈರಸ್ ದಿನಗಳಲ್ಲಿ ವಿದೇಶಗಳಲ್ಲಿ ತನ್ನ ಪ್ರಜೆಗಳನ್ನು ಚೀನಾದ ಪ್ರಜೆಗಳು ಎಂಬುದಾಗಿ ತಪ್ಪಾಗಿ ಭಾವಿಸಿ ಅವರನ್ನು ಕಠಿಣ ನಿರ್ಬಂಧಗಳಿಗೆ ಒಳಪಡಿಸಲಾಗಿತ್ತು ಎಂದು ತೈವಾನ್ ಹೇಳಿದೆ.
ಹೊಸ ಪಾಸ್ಪೋರ್ಟ್ನಲ್ಲಿ ‘ತೈವಾನ್’ ಎಂಬುದಾಗಿ ದೊಡ್ಡ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ ಹಾಗೂ ‘ರಿಪಬ್ಲಿಕ್ ಆಫ್ ಚೀನಾ’ವನ್ನು ಅಳಿಸಲಾಗಿದೆ. ಆದರೂ, ಚೀನೀ ಭಾಷೆಯಲ್ಲಿನ ಅದರ ಹೆಸರು ಹಾಗೂ ರಾಷ್ಟ್ರೀಯ ಲಾಂಛನದ ಸುತ್ತ ಸಣ್ಣ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿರುವ ಚೀನೀ ಹೆಸರನ್ನು ಉಳಿಸಲಾಗಿದೆ.

ಅಬ್ಬಬ್ಬಾ ಏನ್ ದುಬಾರಿ ಫೋನು : 97 ಕೋಟಿಯ ಫೋನ್ ನ ವಿಶೇಷತೆಗಳೇನು..! Black diamond Iphone 5

ತೈವಾನ್ ನ ಮೊದಲಿನ ಪಾಸ್ಪೋರ್ಟ್ಗಳಲ್ಲಿ ಅದರ ಔಪಚಾರಿಕ ಹೆಸರು ‘ರಿಪಬ್ಲಿಕ್ ಆಫ್ ಚೀನಾ’ ಎನ್ನುವುದನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿತ್ತು. ‘ತೈವಾನ್’ ಎನ್ನುವುದನ್ನು ಕೆಳಗೆ ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿತ್ತು. ಇದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲದೇ ತೈವಾನ್ ಚೀನಾ ದೇಶದ ಭಾಗವೆಂದೇ ಅನೇಕ ಗೊಂದಲಗಳು ಇದ್ದವು.

ಲಡಾಕ್ ಗಡಿಯಿಂದ 10,000 ಸೈನಿಕರನ್ನ ವಾಪಸ್ ಕರೆಸಿಕೊಂಡ ಚೀನಾ: ಕಾರಣ!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd