ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಹಾಯ ಹಸ್ತ ಚಾಚಿದ್ದಾರೆ. ಅದರಲ್ಲೂ ನಟರ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟರ ಹೆಸರಿನಲ್ಲಿ ಬೀದಿಗಿಳಿದು ಬಡವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
I'm doing my best through my trust n shall continue to do more.
Mainly,,,I'm very happy about all my Frnzz coming together to serve those in need at their respective places.
Time to put away differences.🙏🏼🙏🏼
Every life is precious ,,
Every life is ours.#StayHomeStaySafe.
🤗🤗 pic.twitter.com/d6R2sdtYso— Kichcha Sudeepa (@KicchaSudeep) April 5, 2020
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋಯೊಂದನ್ನು ಸುದೀಪ್ ಹಂಚಿಕೊಂಡಿದ್ದು, ಕೊರೊನಾ ಹೋರಾಟಕ್ಕೆ ಸಿಕ್ಕಿರೋ ಸ್ಪಂದನೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಜನರಿಗೆ ಆಹಾರ, ಅಗತ್ಯ ವಸ್ತುಗಳನ್ನು ವಿಸ್ತರಿಸುತ್ತಿದ್ದಾರೆ. ‘ನನ್ನ ಸ್ನೇಹಿತರ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನಾನೂ ಕೂಡ ನನ್ನ ಕೈಲಾದ ಸಹಾಯ ಮಾಡ್ತೀನಿ..ನಾವಷ್ಟೇ ಅಲ್ಲದೇ ಎಲ್ಲಾ ನಟರ ಅಭಿಮಾನಿಗಳು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ಕಿಚ್ಚ.
ಇನ್ನು ಕಿಚ್ಚನ ಅಭಿಮಾನಿಗಳು ರಾಜ್ಯಾದ್ಯಂತ ಜನಪರ ಕಾರ್ಯಗಳಲ್ಲಿ ತೊಡಗಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಬಡಜನರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಮಾಡುತ್ತಿದ್ದಾರೆ.








