ಓಂ ಶಕ್ತಿಗೆ ತೆರಳಿದ್ದ 150 ಯಾತ್ರಿಕರು ಕ್ವಾರಂಟೈನ್

1 min read
OM Shakti Saaksha Tv

ಓಂ ಶಕ್ತಿಗೆ ತೆರಳಿದ್ದ 150 ಯಾತ್ರಿಕರು ಕ್ವಾರಂಟೈನ್ Saaksha Tv

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಏರಿಯಾಗುತ್ತಿದೆ. ಇದರ ಮದ್ಯೆ ಓಂ ಶಕ್ತಿಗೆ ಹೋಗಿ ಬಂದ ಅನೇಕರಲ್ಲಿ ಪಾಸಿಟಿವ್ ವರದಿ ಬಂದಿದ್ದು ತೆಲೆನೋವಾಗಿದೆ. ಓಂ ಶಕ್ತಿಗೆ ಹೋಗಿ ಪಾಪಸ್ ಆದ ಮಳವಳ್ಳಿ ತಾಲ್ಲೂಕಿನ ಒಕ್ಕಲಿಗರಕೊಪ್ಪಲು ಗ್ರಾಮದ ಭಕ್ತಾದಿಗಳು ದಂಡಿನ ಮಾರಮ್ಮ ದೇವಸ್ಥಾನದ ಬಳಿ ತಂಗಿದ್ದರು ಇವರನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕ್ವಾರಂಟೈನ್ ಕೇಂದ್ರಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಅಲ್ಲದೇ ಒಂದೇ ಬಸ್ ನಲ್ಲಿ 50 ಕ್ಕೂ ಹೆಚ್ಚು ಹೆಚ್ಚು ಜನ ಯಾತ್ರೆಕೈಗೊಂಡಿದ್ದರು. ಇವರನ್ನು ಮಳವಳ್ಳಿ KSRTC ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಿ ಬಳಿಕ ಎಲ್ಲರಿಗೂ ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ನೆಗೆಟಿವ್ ಬಂದವರಿಗೆ ಮತ್ತೆ 7 ದಿನಗಳ ನಂತರ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ.

ಇದರಲ್ಲಿ ನೆಗಟಿವ್ ಬಂದವರಿಗೆ ಮಾತ್ರ ಮನೆಗೆ ಕಳುಹಿಸಲಾಗುತ್ತದೆ. ಮತ್ತೆ ಇಂದು ಕೂಡ ಮೂರು ಬಸ್ ಗಳಲ್ಲಿ ಓಂ ಶಕ್ತಿ ಭಕ್ತಾದಿಗಳು ವಾಪಸ್ಸಾಗಿದ್ದಾರೆ. ಇದರಲ್ಲಿ ಮಳವಳ್ಳಿಯ ಸುಮಾರು 150ಕ್ಕೂ ಹೆಚ್ಚು ಓಂ ಶಕ್ತಿ ಭಕ್ತಾದಿಗಳು ಇರಬಹದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd