ನಿನ್ನೆಯಷ್ಟೇ ದೇಶದಲ್ಲಿ ರೈಲು ಸೇವೆಗಳಿಗಿದ್ದ ನಿರ್ಬಂಧ ಭಾಗಶಃ ಸಡಿಲಿಕೆಗೊಳಿಸಿರುವ ಕೇಂದ್ರ ಸರ್ಕಾರ. ವಿಮಾನಯಾನ ಸೇವೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಯೋಜನೆಗಳನ್ನು ಸಿದ್ಧ ಪಡಿಸುತ್ತಿದೆ. ಇದಕ್ಕಾಗಿ ಡಿಜಿಸಿಎ ಅಧಿಕಾರಿಗಳು, ಸಿಐಎಸ್‌ಎಫ್, ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಈಗಾಗಲೇ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳನ್ನು ಪುನರಾರಂಭಿಸುವ ಕುರಿತು ಪರಿಶೀಲಿಸುತ್ತಿದೆ.
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಮೇ. 15ರ ಒಳಗೆ ದೇಶಿಯ ವಿಮಾನಗಳು ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸೋದಾಗಿ ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ ಎಂದೂ ಸಹ ತಿಳಿಸಿದ್ದಾರೆ








