ಬೆಂಗಳೂರು: ಆಟೋ ಚಾಲಕರಿಂದ ರ್ಯಾಪಿಡೋ ಬೈಕ್(Rapido Bike) ಸವಾರರ ಮೇಲೆ ದೌರ್ಜನ್ಯಗಳು ಬೆಳಕಿಗೆ ಬರುತ್ತಲೇ ಇವೆ.
ರ್ಯಾಪಿಡೋ ಬೈಕ್ ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ಆಟೋ ಚಾಲಕ(Auto Driver)ನೊಬ್ಬ ಆಟೋ ಹರಿಸಲು ಯತ್ನಿಸಿರುವ ಘಟನೆ ಹೆಚ್ಎಸ್ಆರ್ ಲೇಔಟ್ ಸೆಕ್ಟರ್ 1ರಲ್ಲಿ ನಡೆದಿದೆ.
ಬೆಳಿಗ್ಗೆ 3.30ರ ಸಮಯದಲ್ಲಿ ರ್ಯಾಪಿಡೋ ಬೈಕ್ ಬುಕ್ ಮಾಡಿ ಟೆಕ್ಕಿಯೊಬ್ಬರು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ನೋಡುತ್ತಿದ್ದಂತೆ ಟೆಕ್ಕಿ ಮೇಲೆ ಆಟೋ ನುಗ್ಗಿಸಿದ್ದಾನೆ. ಆಟೋ ಡಿಕ್ಕಿ ರಭಸಕ್ಕೆ ಟೆಕ್ಕಿ ರಸ್ತೆ ಬದಿಗೆ ಬಿದ್ದಿದ್ದಾನೆ. ಆಟೋ ಚಾಲಕನ ಈ ಗುಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಲಾಗಿದೆ.