ಹುಬ್ಬಳ್ಳಿ : ತನ್ನಲ್ಲಿರುವ ಅಪಾರವಾದ ಜ್ಞಾಪಕ ಶಕ್ತಿ ಹಾಗೂ ಸಾಮಾನ್ಯ ಜ್ಞಾನದ ಮೂಲಕ ಹುಬ್ಬಳ್ಳಿಯ 3 ವರ್ಷದ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ. ಸತ್ತೂರಿನ ಸನಸಿರಿ ನಗರದ ನಿವಾಸಿಗಳಾದ ಶ್ವೇತಾ ಸರದೇಶಮುಖ, ವಿನಾಯಕ ಸರದೇಶಮುಖ ಎಂಬುವರ ಪುತ್ರ ಅದ್ವೈತ್ ಸರದೇಶಮುಖ ಇಡೀ ದೇಶದ ಗಮನ ಸೆಳೆದಿದ್ದಾನೆ.
ಅದ್ವೈತ್ ಗಿನ್ನೂ ಮೂರು ವರ್ಷ 10 ತಿಂಗಳು ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಅರಳು ಹುರಿದಂತೆ ಮಾತನಾಡುತ್ತಾನೆ. ವಿಶ್ವದ ಏಳು ಖಂಡಗಳು, ರಾಜ್ಯಗಳ ರಾಜಧಾನಿ ಹೆಸರು, ಸೌರ ಮಂಡಲದ ಗ್ರಹಗಳ ವಿವರವನ್ನು ಪಟ ಪಟನೇ ಹೇಳುತ್ತಾನೆ. ದೇಶದ ವಿವಿಧ ರಾಜ್ಯ, ಜಿಲ್ಲೆಗಳು, ಕಾಲಚಕ್ರ, 28 ನಕ್ಷತ್ರ, 1ರಿಂದ 100ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಸಂಖ್ಯೆ, 1ರಿಂದ 50ರವರೆಗೆ ಹಿಂದಿ ಸಂಖ್ಯೆ, ರಾಶಿಗಳು, 12 ವಿವಿಧ ಶ್ಲೋಕಗಳು, ವಿಷ್ಣುವಿನ ದಶಾವತಾರ, ಇಂಗ್ಲಿಷ್ ಕವಿತೆ, ಕನ್ನಡದ ಸಣ್ಣ ಕತೆಗಳು, ದೇಶದ ಪ್ರಧಾನಿ ಮತ್ತು ಮಂತ್ರಿಗಳ ಹೆಸರುಗಳನ್ನು ಹೇಳುತ್ತಾನೆ.
ಅಂದಹಾಗೆ ಅದ್ವೈತ್ ತಾಯಿ ಶ್ವೇತಾ ಸರದೇಶಮುಖ ಖಾಸಗಿ ಶಾಲೆ ಶಿಕ್ಷಕಿ. ತಂದೆ ವಿನಾಯಕ ಸರದೇಶಮುಖ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
https://youtu.be/CIxpZoOlwiU








