ಪುತ್ತೂರು: ಮದರಂಗಿ ಶಾಸ್ತ್ರ ಮುಗಿಸಿ ವಿವಾಹಕ್ಕೆ ತಯಾರಾಗಿದ್ದ ಮದುಮಗಳು ಕಾಣೆಯಾಗಿ ವಿವಾಹ ಕಾರ್ಯಕ್ರಮವೇ ರದ್ದಾದ ಘಟನೆ ಪುತ್ತೂರಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆಯಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಯ ಮಗಳ ವಿವಾಹವು ಕುಂಬ್ರದ ಶಿವಕೃಪಾ ಸಭಾ ಭವನದಲ್ಲಿ ಫೆ.26ರಂದು ನಿಗದಿಯಾಗಿತ್ತು. ಅದರಂತೆ ವಧುವಿನ ಕುಟುಂಬಸ್ಥರು ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದರು. ಇತ್ತ ಮನೆಯಲ್ಲಿ ಫೆ.25ರ ರಾತ್ರಿ ಮದರಂಗಿ ಶಾಸ್ತ್ರ ಸಂಭ್ರಮವೂ ನಡೆದಿತ್ತು. ಮಧ್ಯರಾತ್ರಿ 12 ಗಂಟೆಯವರೆಗೂ ಮದರಂಗಿ ಶಾಸ್ತ್ರ ನಡೆದಿದ್ದು, ಊಟ ಮಾಡಿ ಮಲಗಿದ್ದವರು ಬೆಳಗ್ಗೆ ಎದ್ದಾಗ ಮನೆಯಲ್ಲಿ ಮಲಗಿದ್ದ ವಧು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ವಧು ನಾಪತ್ತೆಯಾದ ವಿಷಯವನ್ನು ವರನ ಮನೆಯವರಿಗೂ ತಿಳಿಸಿದ್ದು, ಮದುವೆಯನ್ನು ರದ್ದು ಮಾಡಲಾಗಿದೆ. ಇನ್ನು ಘಟನೆಯ ಕುರಿತು ವಧುವಿನ ತಂದೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.
ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...








