U/A ಸರ್ಟಿಫಿಕೇಟ್ ಪಡೆದ ಪವರ್ ಸ್ಟಾರ್ “ಜೇಮ್ಸ್ “ ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೇಮ್ಸ್ ಸಿನಿಮಾಗೆ ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದೆ.
ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನ ನೊಡಬೇಕು ಅಂತ ಇಡೀ ಕನ್ನಡಿಗರು ಮಾತ್ರವಲ್ಲ ಬೇರೆ ಭಾಷೆಯ ಬೇರೆ ದೇಶದ ಜನರು ಕಾಯುತ್ತಿದ್ದಾರೆ. ಜೇಮ್ಸ್ ಸಿನಿಮಾದ ಪ್ರತಿಯೊಂದು ಅಪ್ಟೇಟ್ ಗಳನ್ನ ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೇಮ್ಸ್ ಸಿನಿಮಾದ ಸೆನ್ಸಾರ್ ಮುಗಿದಿದ್ದು ಬಿಡುಗಡೆಯ ಸಿದ್ಧತೆ ಜೋರಾಗಿ ಜರುಗುತ್ತಿದೆ.
ಸಿನಿಮಾದ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು ಎ ಸರ್ಟಿಫಿಕೇಟ್ ನೀಡಿದೆ. ಚಿತ್ರ ತುಂಬಾ ಚೆನ್ನಾಗಿದೆ ಎಂದು ಸೆನ್ಸಾರ್ ಮಂಡಳಿಯವರು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸೆನ್ಸಾರ್ ಮಂಡಳಿ ನೀಡಿದ್ದ ಅಭಿಪ್ರಾಯವನ್ನ ನಿರ್ದೇಶಕ ಚೇತನ್ ಮತ್ತು ನಿರ್ಮಾಕ ಕಿಶೋರ್ ಹಂಚಿಕೊಂಡಿದ್ದಾರೆ.
ಜೇಮ್ಸ್ ಸಿನಿಮಾದ ಮೊದಲ ಹಾಡು ಟ್ರೇಡ್ ಮಾರ್ಕ್ ಸಾಂಗ್ ಈಗಾಗಲೇ ಬಿಡುಗಡೆಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಬಿಡುಗೆಡಯಾಗಿದ್ದ ಕೆಲದಿನಗಳ ಕಾಲ ಹಾಡು ಯುಟ್ಯೂಬ್ ನಲ್ಲಿ ಟ್ರೆಡಿಂಗ್ ನಲ್ಲಿತ್ತು. ಯೂಟ್ಯೂಬ್ ನಲ್ಲಿ ಲಕ್ಷಾಂತರ ಬಾರಿ ವಿಕ್ಷಣೆಗೆ ಒಳಗಾಗಿದೆ.
ಇನ್ನೂ ಚಿತ್ರದ ಟೀಸರ್ ನಲ್ಲಿ ಪವರ್ ಸ್ಟಾರ್ ಕ್ಲಾಸ್ ಅಂಡ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫೈಟಿಂಗ್ ದೃಶ್ಯಗಳು ಮೈನವಿರೇಳಿಸುವಂತಿವೆ. ತಮ್ಮನ ಪಾತ್ರಕ್ಕೆ ಅಣ್ಣ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಪ್ರಿಯಾ ಅನಂದ್ ರಾಜಕುಮಾರ್ ಬಳಿಕ ನಾಯಕಿಯಾಗಿ ತೆರೆಹಂಚಿಕೊ0ಡಿದ್ಧಾರೆ…