ಕರೋನಾ ವ್ಯಾಕ್ಸಿನ್ ಪಡೆದ ನಂತರ ಮಕ್ಕಳಿಗೆ ರಜೆ ಘೋಷಣೆ….
ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕರೋನಾ ಲಸಿಕೆಯನ್ನ ನೀಡಲು ಕೇಂದ್ರ ಸರ್ಕಾರ ನಿರ್ದೇಶಿಸಿದೆ ಅದರಂತೆ ರಾಜ್ಯ ಸರ್ಕಾರ ಸಹ ಮಕ್ಕಳಿಗೆ ಕರೋನಾ ಲಸಿಕೆ ನೀಡಲು ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದೆ.
ಲಸಿಕೆ ಪಡೆದ ನಂತರ ಮರುದಿನ ಮಕ್ಕಳಿಗೆ ಸುಸ್ತು ಜ್ವರ ಕೈ ನೋವು ಕಾಣಿಸಿಕೊಳ್ಳಬಹುದು ಈ ಹಿನ್ನಲೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಿದ ನಂತರ ದು ದಿನ ರಜೆ ನಿಡಲು ಸರ್ಕಾರ ತೀರ್ಮಾನಿಸಿದೆ.
ಪ್ರತಿಶಾಲೆಯಲ್ಲಿಮೊದಲ ದಿನ ಕೇವಲ 50 ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಮುನ್ನೆಚ್ಚೆರಿಕೆಯ ಕ್ರಮವಾಗಿ ವ್ಯಾಕ್ಸಿನ್ ಪಡೆಯುವ ಸಮಯದಲ್ಲಿ ಶಾಲೆಗಳ ಮುಂದೆ ಆಂಬುಲೆನ್ಸ್ ಅನ್ನ ನಿಯೋಜನೆ ಮಾಡಲಾಗಿದೆ.
ರಾಜ್ಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೊಡ್ಡ ಮಟ್ಟದಲ್ಲಿ ಲಸಿಕೆ ಅಭಿಯಾನ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಶನಿವಾರ ಹೇಳಿಕೆ ನೀಡಿದ್ದಾರೆ.