ಸಿಇಒ ಒಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ ಲಭಿಸಿದೆ.
ದಂಡು ಮಂಡಳಿ ಸಿಇಒ (Dandu Board CEO) ಆತ್ಮಹತ್ಯೆ ಪ್ರಕರಣವೇ ಸದ್ಯ ಆಘಾತಕಾರಿಯಿಂದ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಆನಂದದಿಂದ ಸಾಯುವುದು ಹೇಗೆಂದು ವಿಡಿಯೋ ನೋಡಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ತಮಿಳುನಾಡು ಮೂಲದ ಸಿಇಒ ಕೆ.ಆನಂದ್ (40) ಸಾವನ್ನಪ್ಪಿದ ವ್ಯಕ್ತಿ. ಸಿಬ್ಬಂದಿಗೆ ಅನುಮಾನ ಉಂಟಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಡ್ ರೂಮ್ ನಲ್ಲಿ ಶವದೊಂದಿಗೆ ಆನ್ ಮಾಡಿದ್ದ ಮ್ಯೂಸಿಕ್ ಕೂಡ ಹಾಗೆಯೇ ಇತ್ತು. ಸಾಯುವುದಕ್ಕೂ ಮುನ್ನ ತಮ್ಮ ಕೋಣೆಯಲ್ಲಿ ಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಲ್ಯಾಪ್‍ಟಾಪ್‍ನಲ್ಲಿ ಸರ್ಚ್ ಮಾಡಿದ್ದರು ಎನ್ನಲಾಗಿದೆ. ಒಬ್ಬ ವ್ಯಕ್ತಿ ನಗುನಗುತಾ ಡ್ಯಾನ್ಸ್ ಮಾಡುತ್ತಾ ಪ್ರಾಣ ಬಿಡುವ ವೀಡಿಯೋ ಸರ್ಚ್ ಮಾಡಿದ್ದಾರೆ. ಹೀಗಾಗಿ ಡ್ಯಾನ್ಸ್ ಮಾಡುತ್ತ ಸಾವನ್ನಪ್ಪಿದರಾ ಎಂಬ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.