ದೇಶದ ಪ್ರಗತಿಗೆ ದೇಶದ ಸಮತೋಲಿನ ಅಭಿವೃದ್ಧಿ ಅಗತ್ಯ : ಮೋದಿ

1 min read

ದೇಶದ ಪ್ರಗತಿಗೆ ದೇಶದ ಸಮತೋಲಿನ ಅಭಿವೃದ್ಧಿ ಅಗತ್ಯ : ಮೋದಿ Modi saaksha tv

ಉತ್ತರ ಪ್ರದೇಶ : ದೇಶದ ಸಂಪೂರ್ಣ ಪ್ರಗತಿಗೆ ದೇಶದ ಸಮತೋಲಿತ ಅಭಿವೃದ್ಧಿಯೂ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿಗಳು ಇಂದು ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ರಕ್ಷಣೆಗೆ ಮತ್ತಷ್ಟು ಬಲ ನೀಡುವ ಪೂವಾರ್ಂಚಲ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾರತದ ಪೂರ್ವ ಭಾಗ, ಈಶಾನ್ಯ ವಲಯಗಳಲ್ಲಿ ಪ್ರಗತಿಗೆ ಅವಕಾಶ ಇದ್ದರೂ, ಅವುಗಳಿಗೆ ಸಿಗಬೇಕಾದಷ್ಟು ಪ್ರಗತಿಯ ಸೌಲಭ್ಯ ದೊರಕಲಿಲ್ಲ.

Modi  saaksha tv

ಉತ್ತರ ಪ್ರದೇಶದಲ್ಲಿ ಕೂಡ ಇದೇ ರೀತಿಯ ರಾಜಕೀಯದಿಂದ ದೀರ್ಘಕಾಲದವರೆಗೆ ಸವಾರ್ಂಗೀಣ ಅಭಿವೃದ್ಧಿ ಆಗಲೇ ಇಲ್ಲ. ಈಗ ಪೂವಾರ್ಂಚಲದಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದೆ.

ಮೂರು ವರ್ಷಗಳ ಹಿಂದೆ ತಾವು ಪೂವಾರ್ಂಚಲ ಎಕ್ಸ್ ಪ್ರೇಸ್ ಹೆದ್ದಾರಿಗೆ ಶಿಲಾನ್ಯಾಸ ಮಾಡಿದಾಗ, ಅದೇ ಹೆದ್ದಾರಿಯಲ್ಲಿ ಒಂದು ದಿನ ವಿಮಾನದಲ್ಲಿ ಬಂದು ಇಳಿಯುತ್ತೇನೆ ಎಂದು ಯೋಚಿಸಿಯೂ ಇರಲಿಲ್ಲ ಎಂದು ಹೇಳಿದರು.

ಈ ಎಕ್ಸ್ ಪ್ರೆಸ್ ಹೆದ್ದಾರಿ ಉತ್ತರ ಪ್ರದೇಶವನ್ನು ವೇಗವಾಗಿ ಪ್ರಗತಿಯ ಪಥದಲ್ಲಿ ತೆಗೆದುಕೊಂಡು ಹೋಗಲಿದೆ, ನವ ಉತ್ತರ ಪ್ರದೇಶದ ಹೆದ್ದಾರಿಯಾಗಿದೆ.

ಇದು ಉತ್ತರ ಪ್ರದೇಶದ ಆಧುನಿಕ ಮತ್ತು ದೃಢ ಇಚ್ಛಾಶಕ್ತಿಯ ಪ್ರತೀಕವಾಗಿದೆ. ಸಂಕಲ್ಪ ಸಿದ್ಧಿಯ ಜ್ವಲಂತ ಉದಾಹರಣೆಯಾಗಿದೆ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd