( cow died in Andhrapradesh chitturu )
ಆಂಧ್ರಪ್ರದೇಶ : ಸ್ಪೋಟಕ ತುಂಬಿದ್ದ ಆಹಾರ ತಿಂದು ಹಸುವಿನ ದವಡೆ ಛಿದ್ರಗೊಂಡು, ಸತತ 6 ಗಂಟೆಗಳ ವರೆಗೂ ನರಳಿ ನರಳಿ ಪ್ರಾಣಬಿಟ್ಟ ಮನಕಲಕುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಭಾರತದ ಟೆಲಿವಿಷನ್ ಮಾರುಕಟ್ಟೆಯಲ್ಲಿ ಆಂಟಿಟ್ರಸ್ಟ್ ಪ್ರಕರಣವನ್ನು ಎದುರಿಸುತ್ತಿರುವ ಗೂಗಲ್
(cow died )ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಗ್ರಾಮಾಂತರ ಪ್ರದೇಶದ ಚಂದಮಾಮಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡು ಹಂದಿಗಳ ಹಾವಳಿ ತಪ್ಪಿಸಲು, ಕಾಡಂಚಿನ ಗ್ರಾಮದ ರೈತರು ಹಿಟ್ಟಿನಿಂದ ಮಾಡಲಾದ ಆಹಾರದಲ್ಲಿ ಸ್ಪೋಟಕ ತುಂಬಿ ಇಟ್ಟಿದ್ದರು. ಆದ್ರೆ ಇದನ್ನು ತಿಂದ ಹಸುವಿನ ಬಾಯಿ ಛಿದ್ರಗೊಂಡಿದೆ. ಕೊನೆಗೆ ಸತತ 6 ಗಂಟೆಗಳ ಕಾಲ ನರಳಿ ನರಳಿ ಹಸು ಸಾವನಪ್ಪಿದೆ.
ಇದೀಗ ಸ್ಫೋಟಕವಿಟ್ಟಿದ್ದವರ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶವ್ಯಕ್ತವಾಗುತ್ತಿದೆ. ಮನ್ಉಷ್ರ ಸ್ವಾರ್ಥದಿಂದಾಗಿ ಪ್ರಾಣಿಗಳು ಬಲಿಯಾಗುತ್ತಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








