ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೈತ ಸಂಗಾತಿಗಳ ಕಷ್ಟ ಕಾರ್ಪಣ್ಯ ಆಲಿಸಲು ದಯವಿಟ್ಟು ಬನ್ನಿ: sanekere Chitradurga
ಚಿತ್ರದುರ್ಗ,ನವೆಂಬರ್22: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಸಾಣೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಕಾಪರಹಳ್ಳಿ, ಹೆಗ್ಗೆರೆ, ಜಡೆಕುಂಟೆ, ಹುಲಿಕುಂಟೆ, ಕಂದಕೆರೆ, ಗೊಲ್ಲಹಳ್ಳಿ ಸೇರಿದಂತೆ ಎಂಟು ಹತ್ತು ಹಳ್ಳಿಗಳ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಹೆಗ್ಗೆರೆಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ 2007ರಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರಭಾವಿ ಹಣವಂತ ಆರ್. ಪ್ರವೀಣ್ ಚಂದ್ರ ಒಡೆತನದ ಪ್ರಕಾಶ್ ಸ್ಪಾಂಜ್ ಐರನ್ ಪವರ್ ಪ್ರೈವೆಟ್ ಲಿಮಿಟೆಡ್. sanekere Chitradurga

ಈ ಕಾರ್ಖಾನೆಯಿಂದ ಹೊರಬರುತ್ತಿರುವ ಕಲುಷಿತ ನೀರು ಕುಡಿದು ಜಾನುವಾರುಗಳು ಸಾಯುತ್ತಿವೆ. ರಾಸಾಯನಿಕ ತ್ಯಾಜ್ಯದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರೈತ ರೈತ ಎಂದು ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡು ವಿಧಾನಸೌಧದ ಮೂರನೆಯ ಮಹಡಿ ಹತ್ತಿದವರ ಕಿವಿ ಕೊಂಚ ಮಂದ. ಗಟ್ಟಿಯಾದ ಧ್ವನಿಯಲ್ಲಿ ನಾವು ಕೂಗಿ ಕಿರುಚಿ ಹೇಳಬೇಕಿದೆ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ನೋಡ ಬನ್ನಿ . ನಮ ಧ್ವನಿಗೆ ನಿಮ್ಮ ಧ್ವನಿಗಳೂ ಜೊತೆಯಾಗಲಿ. ಬನ್ನಿ ನಮ್ಮ ಸಭೆಯಲ್ಲಿ ಭಾಗವಹಿಸಿ. ನಮ್ಮ ಹೋರಾಟಕ್ಕೆ ದೈಹಿಕ ಮಾನಸಿಕ ನೈತಿಕ ಬೆಂಬಲ ನೀಡಿ. ಭವಿಷ್ಯದಲ್ಲಿ ನಮ್ಮ ಬದುಕು ಭರವಸೆಯ ಕುರಿತಾಗಿ ಚರ್ಚಿಸೋಣ, ಚಿಂತಿಸೋಣ, ತಾರ್ಕಿಕ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕೇಳುವ ಕೃಪೆ ಮಾಡಿ. ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಎಂದು ನೊಂದ ರೈತರ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.
ಈ ಕುರಿತು ಎಸ್.ಆರ್ ಹಿರೇಮಠ ಸಾಮಾಜಿಕ ಹೋರಾಟಗಾರರು ಸಮಾಜ ಪರಿವರ್ತನಾ ಸಮುದಾಯ ಧಾರವಾಡ ಅವರು, ಪ್ರಭುತ್ವವೆನ್ನುವುದು ಹಣವಂತರ ಪಾಲಿಗೆ ಬಂಗಾರದ ಖಜಾನೆ; ಬಡವರು ದೀನರು ಅಸಹಾಯಕರು ರೈತರ ಪಾಲಿಗೆ ಯಾವತ್ತೂ ಮರೀಚಿಕೆಯೇ ಎನ್ನುವ ಅಭಿಪ್ರಾಯದೊಂದಿಗೆ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಚಿತ್ರನಟ ಮತ್ತು ಸಾಮಾಜಿಕ ಹೋರಾಟಗಾರ ಯುವ ಮುಂದಾಳು ಚೇತನ್ ಯಾವುದೇ ಹೋರಾಟವಾದರೂ ಅದು ಜನಕೇಂದ್ರಿತವಾಗಿರಬೇಕು. ಜನಜಾಗೃತಿ ಉಂಟುಮಾಡಬೇಕು. ಜನರ ಅಳಲು ಅಹವಾಲುಗಳ ಸುತ್ತಲಿನ ಧ್ವನಿ ಹೊರಡಿಸುವಂತಿರಬೇಕು. ಆ ಧ್ವನಿ ಆಳುವ ದೊರೆಗಳ ಕಿವಿ ಮುಟ್ಟಬೇಕು ಎನ್ನುವ ಮೂಲಕ ರೈತ ಚಳುವಳಿಗೆ ತಾವು ಸದಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಾಮಾಜಿಕ ನ್ಯಾಯದ ತಕ್ಕಡಿ ಸದಾ ಪ್ರಭಾವಿಗಳ ಕಡೆಯೇ ತೂಗುತ್ತದೆ. ಆದಾಯದ ಲಾಭ ಪ್ರಭಾವಿಗಳಿಗೆ; ನಷ್ಟ ಮಾತ್ರ ಅಮಾಯಕ ರೈತರಿಗೆ. ಅಧಿಕಾರಶಾಹಿ ಅಮೃತ ಪ್ರಭಾವಿ ದುಡ್ಡಿನ ಧನಿಗಳಿಗೆ; ಜ್ವಲಂತ ಸಮಸ್ಯೆಗಳ ಹಾಲಾಹಲ ರೈತರ ಪಾಲಿಗೆ. ಇದು ಈ ಸಮಾಜ ಸೃಷ್ಟಿಸಿರುವ ಕರಾಳ ವ್ಯವಸ್ಥೆ ಎಂದು ಯುವ ಮುಂದಾಳು, ದಾವಣಗೆರೆ ರೈತ ನಾಯಕರಾದ ತೇಜಸ್ವಿ ಪಟೇಲ್ ತಮ್ಮ ಅಭಿಮತ ವ್ಯಕ್ತಪಡಿಸಿ ಈ ರೈತರ ಜೊತೆ ನಿಂತಿದ್ದಾರೆ.

ಈಗ ನಿಮ್ಮ ಸರದಿ. ದಯವಿಟ್ಟು ರೈತ ಸಂಕಷ್ಟದಲ್ಲಿರುವ ಈ ನಿರ್ಣಾಯಕ ಕ್ಷಣದಲ್ಲಿ ರೈತನ ಪರ ನಿಲ್ಲಿ. ರೈತ ಮಾತ್ರ ಈ ಸಮಾಜಕ್ಕೆ ನಾಡಿಗೆ ದೇಶಕ್ಕೆ ಅನ್ನ ನೀಡಬಲ್ಲನೇ ಹೊರತು ಪ್ರವೀಣ್ ಚಂದ್ರನಂತಹ ಉದ್ಯಮಿಯಲ್ಲ. ಪ್ರಕಾಶ್ ಸ್ಪಾಂಜ್ ಐರನ್ ಕಾರ್ಖಾನೆಯ ದುರಹಂಕಾರಿ ನಡವಳಿಕೆ ಹೇಗೆ ರೈತರಿಗೆ ಮರಣ ಶಾಸನವಾಗಿದೆ ಎನ್ನುವುದುನವರಿಕೆಯಾಗಬೇಕಿದ್ದರೇ ನೀವು ಬರಲೇಬೇಕು. ಸ್ವಾಭಿಮಾನಿ ನೇಗಿಲಯೋಗಿ ಅನ್ನದಾತರ ಅಹವಾಲು ಕೇಳಲೇಬೇಕು. ರೈತರಿದ್ದರೇ ಮಾತ್ರ ನಾವು ಮತ್ತು ನೀವು. ನಿಮ್ಮ ನಿರೀಕ್ಷೆಯಲ್ಲಿದ್ದಾರೆ ನೊಂದ ರೈತರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೋರೆಕಾಯಿ ತಿನ್ನಲು 6 ಉತ್ತಮ ಕಾರಣಗಳುhttps://t.co/76fhiw24zx
— Saaksha TV (@SaakshaTv) November 21, 2020
10 /12 ನೇ ತರಗತಿ ಪಾಸಾದವರಿಗೆ ಕರ್ನಾಟಕ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ https://t.co/70vCUmpNX0
— Saaksha TV (@SaakshaTv) November 21, 2020
10 ಮತ್ತು 12 ನೇ ತರಗತಿ ಪರೀಕ್ಷೆಗಳು ಖಂಡಿತವಾಗಿಯೂ ನಡೆಯಲಿದೆ – ಅನುರಾಗ್ ತ್ರಿಪಾಠಿhttps://t.co/S7BwXF7H7P
— Saaksha TV (@SaakshaTv) November 21, 2020








