ಚಿಕಿತ್ಸೆಗೆ ತೆರಳಿದ್ದ ಯುವಕನ ಕಿಡ್ನಿಯನ್ನೇ ತೆಗೆದ ವೈದ್ಯರು Saaksha Tv
ಛತ್ತೀಸ್ಗಢ: ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡು ಚಿಕಿತ್ಸೆಗೆ ತೆರಳಿದ್ದ ಯುವಕನ ಕಿಡ್ನಿಯನ್ನೇ ವೈದ್ಯರು ತೆಗೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
10 ವರ್ಷಗಳ ಹಿಂದೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡು ಯುವಕ ಚಿಕಿತ್ಸೆ ಪಡೆದುಕೊಂಡಿದ್ದ. ಚಿಕಿತ್ಸೆಯ ಹತ್ತು ವರ್ಷಗಳ ನಂತರ, ಯುವಕನಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಆತ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ವೇಳೆ ಸತ್ಯ ಬಯಲಾಗಿದೆ. ತನ್ನ ಒಂದು ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ ಎಂದು ತಿಳಿದ ಯುವಕನಿಗೆ ಆಘಾತವಾಗಿದೆ.
ಆರೋಪಿ ವೈದ್ಯರ ವಿರುದ್ಧ ರಾಂಪುರ ಪೊಲೀಸ್ ಠಾ0ಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಆರೋಪಿ ವೈದ್ಯನ ಪದವಿ ಸುಳ್ಳು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಂತೋಷ್ ಗುಪ್ತಾ ಹತ್ತು ವರ್ಷಗಳ ಹಿಂದೆ ಕಿಡ್ನಿಯಲ್ಲಿನ ಕಲ್ಲುಗಳಿಗೆ ಕೊರ್ಬಾದ ರಾಜ್ಗಮರ್ ರಸ್ತೆಯಲ್ಲಿರುವ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನ ವೈದ್ಯರು ಚಿಕಿತ್ಸೆ ನೀಡಿದ್ದರು.
ಆದರೆ, ವೈದ್ಯರು ಕಿಡ್ನಿ ಸ್ಟೋನ್ ತೆಗೆಯುವ ಬದಲು ಅವರ ಒಂದು ಕಿಡ್ನಿ ತೆಗೆದಿದ್ದಾರೆ. ಇದೀಗ ಸಂತ್ರಸ್ತ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ದೂರು ಮಾನ್ಯವಾಗಿದೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ನಕಲಿ ವೈದ್ಯರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ರಾಂಪುರ ಚೌಕಿ ಪೊಲೀಸರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.