ಸಿಲಿಕಾನ್ ಸಿಟಿ ನಾಟಕ ಪ್ರಿಯರಿಗೆ ಮೂರು ದಿನಗಳ ನಾಟಕೋತ್ಸವದ ರಸದೌತಣ
ಬೆಂಗಳೂರು: ರಾಜ್ಯದ ಮೂರು ಅತ್ಯುತ್ತಮ ನಾಟಕಗಳು ಸಿಲಿಕಾನ್ ಸಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಸಮಷ್ಟಿ ರಂಗ ತಂಡವು ನಗರದ ಎ.ಡಿ.ಎ ರಂಗಮಂದಿರದಲ್ಲಿ ಮಾರ್ಚ್ 4 ರಿಂದ ಮೂರು ದಿನಗಳ ನಾಟಕೋತ್ಸವ ನಡೆಸಲಿದೆ.
ಮಾರ್ಚ್ 4 ರಂದು, ಅಸ್ತಿತ್ವ ತಂಡ ಅಭಿನಯಿಸುವ “ಕೆಂಡೋನಿಯನ್ಸ್ ” ಪ್ರದರ್ಶನಗೊಳ್ಳಲಿದೆ.
ಮಾರ್ಚ್ 5 ರಂದು ಸಂಗಮ ಕಲಾವಿದೆರ್ ತಂಡ ಅಭಿನಯಿಸಿವ ” ವಿ ಟೀಚ್ ಲೈಫ್ ಸರ್ ” ನಾಟಕ ಹಾಗೂ ಮಾರ್ಚ್ 6 ರಂದು, ಶೇಷಗಿರಿ ಕಲಾತಂಡ ಅಭಿನಯಿಸುವ “ವಾಲಿವಧೆ” ನಾಟಕ ಪ್ರದರ್ಶನಗೊಳ್ಳಲಿದೆ.
ಈ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಮಂಗಳೂರು, ಮಣಿಪಾಲ, ಹಾವೇರಿ ರಂಗತಂಡಗಳು ನಾಟಕಗಳನ್ನು ಪ್ರದರ್ಶಿಸುತ್ತಿವೆ.
ಬೆಂಗಳೂರಿನ ಪ್ರೇಕ್ಷಕರಿಗೆ ಬೆಂಗಳೂರೇತರ ತಂಡಗಳ ನಾಟಕಗಳನ್ನು ಪ್ರದರ್ಶಿಸಿ, ಬೆಂಗಳೂರಿಗರು ಹೊಸ ನಾಟಕವನ್ನು ನೋಡಲು ಈ ಮೂಲಕ ಅವಕಾಶ ಕಲ್ಪಿಸುವ ಗುರಿ ತಂಡದ್ದಾಗಿದೆ.
ಮೂರು ನಾಟಕಗಳ ಪೈಕಿ 2 ನಾಟಕಗಳು ಎನ್ ಎಸ್ ಡಿ ಆಯೋಜಿಸಿದ್ದ ಅಂತರಾಷ್ಟ್ರೀಯ ನಾಟಕೋತ್ಸವವಾದ ಭಾರತ ರಂಗ ಮಹೋತ್ಸವಕ್ಕೆ ಆಯ್ಕೆಯಾಗಿದ್ದವು.
ಅಲ್ಲದೆ ವಾಲಿವಧೆ ನಾಟಕವು ತುಂಬಾ ಜನ ಮೆಚ್ಚಿರುವ ನಾಟಕವಾಗಿದೆ.
The Drama Festival in Bangalore