ಮಡಿಕೇರಿ: ಕೇವಲ ಮೂರೇ ಗಂಟೆಯಲ್ಲಿ ಬರೋಬ್ಬರಿ 300 ಕಿ.ಮೀ ಕ್ರಮಿಸಿ 7 ದಿನದ ಮಗುವಿನ ಪ್ರಾಣವನ್ನು ಚಾಲಕ ಕಾಪಾಡಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕ (Ambulance Driver) ಶಿಜು ವರ್ಗಿಸ್ ಅವರು Zero Traffic ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರ ಕ್ರಮಿಸಿದ್ದಾರೆ. ಅದು ಕೇವಲ 3 ಗಂಟೆ ಅವಧಿಯಲ್ಲಿ ಕ್ರಮಿಸಿ ಮಗುವಿನ್ನ ಪ್ರಾಣ ಉಳಿಸಿದ್ದಾರೆ. ಸದ್ಯ ಚಾಲಕನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವನ್ನು ಕೇರಳದ ಪೆರಂದಲ್ ಮಣ್ಣನ್ ನಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಚಾಲಕ ಕೇವಲ 3 ಗಂಟೆಯಲ್ಲಿ ತೆರಳಿ, ಮಗುವಿನ ಪ್ರಾಣ ಉಳಿಸಿದ್ದಾರೆ.