ಕನ್ನಡಕ್ಕಾಗಿ ಒಂದಾದ ಚಂದನವನದ ಸಿನಿ ತಾರೆಯರು……
ಕನ್ನಡ ಭಾವುಟಕ್ಕೆ ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮತ್ತು ಕನ್ನಡ ಪರ ಹೋರಾಟಗಾರರನ್ನ ಬಿಡುಗಡೆ ಮಾಡುವಂತೆ ಇಡೀ ಕನ್ನಡ ಚಿತ್ರರಂಗ ಒಂದಾಗಿ ಆಗ್ರಹಿಸುತ್ತಿದೆ…. ಕನ್ನಡಕ್ಕಾಗಿ ಚಂದನವನದ ತಾರೆಯರು ಮುಂದೆ ಬಂದು ಕೈ ಎತ್ತಿದ್ದಾರೆ…
ಎಂ ಇ ಎಸ್ ಮುಖಂಡ ದೀಪಕ್ ದಳವಿಗೆ ಕನ್ನಡ ಪರ ಹೋರಾಟಗಾರ ನವ ಕರ್ನಾಟಕ ನಿರ್ಮಾಣ ಸೇನೆ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ನೇತೃತ್ವ ಕಾರ್ಯಕರ್ತರು ಮುಖಕ್ಕೆ ಮಸಿ ಬಳಿದಿದ್ದರು. ಇದನ್ನ ವಿರೋಧಿಸಿ ಶಿವಸೇನೆ ಪುಂಡರು ಕೊಲ್ಲಾಪುರದ್ಲಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರು, ಇದರ ವಿರುದ್ದ ಸ್ಯಾಂಡಲ್ವುಡ್ ಸಿನಿ ತಾರೆಯರು ಗರಂ ಆಗಿದ್ದಾರೆ…
ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು – ಗಣೇಶ್ .
ಅವರು ಸುಟ್ಟಿದ್ದು ಧ್ವಜವಲ್ಲ,
ಕನ್ನಡಿಗರ ಸ್ವಾಭಿಮಾನದ ಕಿಚ್ಚು.
ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು.
ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು @CMofKarnatakaಜೈ ಕನ್ನಡಾಂಬೆ!! pic.twitter.com/YsITVrhQwe
— Ganesh (@Official_Ganesh) December 16, 2021
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ. – ದುನಿಯ ವಿಜಯ್.
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ. pic.twitter.com/6K5IxYW3J9
— Duniya Vijay (@OfficialViji) December 16, 2021
ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ ಜೈ ಕನ್ನಡ ಜೈ ಕರ್ನಾಟಕ – ಪ್ರಜ್ವಲ್ ದೇವರಾಜ್.
ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ
ಜೈ ಕನ್ನಡ ಜೈ ಕರ್ನಾಟಕ https://t.co/gkEoC3SA0N— prajwal devaraj (@PrajwalDevaraj) December 15, 2021
ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ. – ಶಿವರಾಜ್ ಕುಮಾರ್.
ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ.#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists@BSBommai @CMofKarnataka @JnanendraAraga @COPBELAGAVI pic.twitter.com/qcjOVdb4SS
— DrShivaRajkumar (@NimmaShivanna) December 15, 2021
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ – ದರ್ಶನ್ ತೂಗುದೀಪ್.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka pic.twitter.com/n8ullGB1FK
— Darshan Thoogudeepa (@dasadarshan) December 15, 2021
ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯಾರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ – ಉಪೇಂದ್ರ.
ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯಾರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ 🙏🙏 pic.twitter.com/6Wnw8U9NcL
— Upendra (@nimmaupendra) December 16, 2021