ಚಿತ್ರರಂಗವೇ ಹಾಗೆ. ಯಾರೊಂದಿಗೆ ಯಾವ ರೀತಿಯ ಸಂಬಂಧ ಬೆರೆತು ಬಿಡುತ್ತದೆ ಎಂಬುವುದೇ ಗೊತ್ತಾಗುವುದಿಲ್ಲ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ‘ಕಜ್ರಾ ರೇ..’ ಹಾಡಿಗೆ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆನಂತರ ಐಶ್ವರ್ಯಾ ರೈ ಅಮಿತಾಭ್ ಬಚ್ಚನ್ ಅವರ ಸೊಸೆಯಾದರು.
ಈಗ ಅಕ್ಕಿನೇನಿ ನಾಗಾರ್ಜುನ ಅವರ ವಿಚಾರದಲ್ಲಿಯೂ ಹಾಗೆ ಆಗಿದೆ. ಅವರು ಶೋಭಿತಾ ಬಗ್ಗೆ ಮಾತನಾಡುವಾಗ ಹಾಟ್ ಅಂತಾ ಹೇಳಿದ್ದರು. ಈಗ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ನಾಗಾರ್ಜುನ ಅವರೇ ಹಂಚಿಕೊಂಡು ನವ ಜೋಡಿಗೆ ಶುಭ ಕೋರಿದ್ದಾರೆ.
ಸದ್ಯ ಈ ಫೋಟೋಗಳನ್ನು ಅಭಿಮಾನಿಗಳು ಸಖತ್ ವೈರಲ್ ಮಾಡುತ್ತಿದ್ದಾರೆ. ಈ ಮಧ್ಯೆ ಸಮಂತಾ ಫ್ಯಾನ್ಸ್ ನಾಗ ಚೈತನ್ಯ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಹಲವರು ನಾಗಾರ್ಜುನ ಅವರ ಹಳೆಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ.
ಶೋಭಿತಾ ಧುಲಿಪಾಲ್ ಅವರು ಚೆನ್ನಾಗಿದ್ದಾರೆ. ನಾನು ಈ ರೀತಿ ಹೇಳಬಾರದು. ಅವರು ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ’ ಎಂದು ಅಕ್ಕಿನೇನಿ ನಾಗಾರ್ಜುನ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಸಮಂತಾ ಹಾಗೂ ನಾಗ ಚೈತನ್ಯ 2021ರಲ್ಲಿ ವಿಚ್ಛೇದನ ಪಡೆದಿದ್ದರು. ಆನಂತರ ನಾಗ ಚೈತನ್ಯ ಅವರು ಸಿಂಗಲ್ ಆಗಿದ್ದರು. ಆ ಬಳಿಕೆ ಅವರಿಗೆ ಶೋಭಿತಾ ಜೊತೆ ಪ್ರೀತಿ ಮೂಡಿತು. ಈಗ ಶೋಭಿತಾ ಹಾಗೂ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮತ್ತೊಂದು ಸದ್ಯದಲ್ಲಿಯೇ ಈ ಜೋಡಿ ದಾಂಪತ್ಯ ಜೀವನ ಆರಂಭಿಸಲು ಮುಂದಾಗಿದೆ.