ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಕಿತಾರತಕ ತನ್ನ ತಂದೆಯೇ ಮೇಲೆಯೂ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ.
ನೇಹಾ ಕೊಲೆ ಪ್ರಕರಣವು ರಾಜ್ಯ ಹಾಗೂ ದೇಶದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್ (Fayaz) ಕುರಿತು ಸ್ಫೋಟಕ ವಿಚಾರವೊಂದು ಈಗ ಹೊರ ಬಿದ್ದಿದೆ. ಕಳೆದ ಮೂರು ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಆರೋಪಿ ಫಯಾಜ್ ತಂದೆ-ತಾಯಿ ನಡುವೆ ಜೋರಾಗಿ ಗಲಾಟೆ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಆರೋಪಿ ಫಯಾಜ್ ತಾಯಿ ಪರ ನಿಂತು ತಂದೆಯ ಮೇಲೆಯೇ ಕೈ ಮಾಡಿದ್ದ ಎಂದು ತಿಳಿದು ಬಂದಿದೆ.
ಆಗ ಆರೋಪಿ ಫಯಾಜ್ ತಂದೆ ಬಾಬಾಸಾಹೇಬ್ ಕೊಂಡುನಾಯ್ಕ್ ಮೇಲಯೇ ಹಲ್ಲೆ ಮಾಡಿದ್ದ. ಆಗ ಬಾಬಾಸಾಹೇಬ್ ಕೊಂಡುನಾಯ್ಕ್ ಮಗನಿಂದ ರಕ್ಷಣೆ ನೀಡಿ ಎಂದು ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಸವದತ್ತಿ ಪೊಲೀಸ್ ಠಾಣೆ ಪಿಎಸ್ ಐ ಆನಂದ್ ಅವರು ಆರೋಪಿ ಕುಟುಂಬವನ್ನು ಕರೆಯಿಸಿ ಮಾತುಕತೆ ನಡೆಸಿ, ಫಯಾಜ್ ನಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದರು.
ಆದರೆ, ಈ ಪ್ರಕರಣ ನಡೆಯುತ್ತಿದ್ದಂತೆ ಆರೋಪಿ ಫಯಾಜ್ ತಂದೆ ಬಾಬಾಸಾಬ್ ಕಾಣೆಯಾಗಿದ್ದಾರೆ. ಬಾಬಾಸಾಬ್ ನಿನ್ನೆ (ಏ.19) ಸಂಜೆಯಿಂದ ಕಾಣೆಯಾಗಿದ್ದು, ಬೆಳಗಾವಿ ಮತ್ತು ಹುಬ್ಬಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.