ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕರಾವಳಿ ಕರ್ನಾಟಕ

ತಿಂಗಳಾದರೂ ಮಗುವಿಗೆ ತಂದೆ ಬಂದಿಲ್ಲ! ಬಿಜೆಪಿ ಮುಖಂಡನ ಮಗನ ನಿರೀಕ್ಷೆಯಲ್ಲಿ ಯುವತಿ!

The father of the child has not arrived for a month! The young woman is expecting the son of a BJP leader!

Shwetha by Shwetha
August 4, 2025
in ಕರಾವಳಿ ಕರ್ನಾಟಕ, Karavali Karnataka, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಮಗುವನ್ನು ತಿಂಗಳಾದರೂ ನೋಡಲು ಬಾರದ ತಂದೆಗಾಗಿ ಕಾಯುತ್ತಿರುವ ತಾಯಿ

ಕಳೆದ ಒಂದು ತಿಂಗಳಿಂದ ಕಂದನನ್ನು ಒಬ್ಬಳೇ ನೋಡಿಕೊಳ್ಳುತ್ತಿರೋ ಸಂತ್ರಸ್ತ ಯುವತಿ, ಮಗುವಿನ ತಂದೆ ಮತ್ತು ಅವರ ಕುಟುಂಬದವರು ಬಂದು ಮಗುವನ್ನು ನೋಡಲಿ ಎಂದು ಕಾಯುತ್ತಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಮಗ ಕೃಷ್ಣ ಜೆ. ರಾವ್ ಯುವತಿಗೆ ಮದುವೆಯಾಗುವ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು. ಇದರಿಂದ ಯುವತಿ ಗರ್ಭಿಣಿಯಾಗಿದ್ದಳು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿ ಪೋಲಿಸ್ ದೂರು ದಾಖಲಿಸಿದ್ದರು.

Related posts

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

August 3, 2026
anna-from-mexico-movie-release-date-dhananjay-shankar-guru

film- ಡಿಸೆಂಬರ್‌ 24ಕ್ಕೆ ತೆರೆಗೆ ಬರಲಿದೆ ಧನಂಜಯ್‌ ಅಭಿನಯದ ‘ಅಣ್ಣ ಫ್ರಮ್‌ ಮೆಕ್ಸಿಕೋ’: ಬರ್ತಿದೆ ‘ಬಡವ ರಾಸ್ಕಲ್’ ಹಿಟ್ ಕಾಂಬಿನೇಷನ್ !

August 3, 2026

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಜೆ. ರಾವ್ ಮತ್ತು ಅವರ ತಂದೆ ಜಗನ್ನಿವಾಸ್ ರಾವ್ ಇಬ್ಬರೂ ಜೈಲಿನಲ್ಲಿದ್ದಾರೆ. ಇತ್ತ, ಒಂದು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ ಯುವತಿ, ತಾನು ಒಬ್ಬಳೇ ಕಂದನನ್ನು ನೋಡಿಕೊಳ್ಳುತ್ತಿರುವುದಾಗಿ ನೋವಿನಿಂದ ಹೇಳಿದ್ದಾರೆ. ಮಗುವಿನ ತಂದೆ ಮತ್ತು ಅವರ ಕುಟುಂಬದವರು ಇನ್ನೂ ಮಗುವನ್ನು ನೋಡಲು ಬಂದಿಲ್ಲ. ‘ಅವರು ಮಾಡಿರುವ ತಪ್ಪಿಗೆ ಮಗುವಿಗೆ ಯಾಕೆ ಶಿಕ್ಷೆ ಕೊಡಬೇಕು?’ ಎಂದು ಯುವತಿ ಪ್ರಶ್ನಿಸಿದ್ದಾರೆ.

ಯುವತಿ ಕೃಷ್ಣ ಜೆ. ರಾವ್ ಅವರ ಮನೆಗೆ ಹೋದಾಗ ಅವರ ಕುಟುಂಬದ ಸದಸ್ಯರು ಒರಟಾಗಿ ಮಾತನಾಡಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಮಗು ಅಲ್ಲಿ ಇದ್ದರೂ ಕೂಡ ಅದನ್ನು ನೋಡಲಿಲ್ಲ. ಇದಲ್ಲದೇ, ಯುವತಿ ತಮ್ಮ ಮನೆಗೆ ಬರುತ್ತಿರುವುದು ತಿಳಿದ ಕೂಡಲೇ, ಯುವತಿಯನ್ನು ಒಳಗೆ ಬಿಡದಂತೆ ಮನೆಯಲ್ಲಿನ ಸದಸ್ಯರಿಗೆ ಕೃಷ್ಣ ಜೆ. ರಾವ್ ಹೇಳಿದ್ದರು ಎಂದು ತಿಳಿದುಬಂದಿದೆ. ಇದರಿಂದ ಯುವತಿ ಮತ್ತು ಅವರ ತಾಯಿ ತುಂಬ ನೋವು ಅನುಭವಿಸಿರುವುದಾಗಿ ಹೇಳಿದ್ದಾರೆ.

ಕೃಷ್ಣ ಜೆ. ರಾವ್ ಮತ್ತು ಯುವತಿಯ ನಡುವಿನ ಸಂಬಂಧ

ಈ ಪ್ರಕರಣದ ಕುರಿತು ಹೇಳುವುದಾದರೆ, ಕೃಷ್ಣ ಮತ್ತು ಯುವತಿಯ ಪರಿಚಯ ಹೈಸ್ಕೂಲ್​ನಲ್ಲಿ ಆಗಿತ್ತು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಕೃಷ್ಣ ಮದುವೆಯಾಗುವ ಭರವಸೆ ನೀಡಿ ಹಲವು ಬಾರಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಕೃಷ್ಣ ಇಂಜಿನಿಯರಿಂಗ್ ಓದುತ್ತಿದ್ದರು. 2024ರ ಅಕ್ಟೋಬರ್ 11ರಂದು ಕೃಷ್ಣ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ನಂತರ 2025ರ ಜನವರಿಯಲ್ಲಿ ಪುನಃ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರು. ನಂತರ ಯುವತಿ ಗರ್ಭಿಣಿಯಾದಾಗ ಮದುವೆಯಾಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರವಾಗಿ ನಿಂತ ಬಿಜೆಪಿ

ಈ ಬಗ್ಗೆ ದೂರು ದಾಖಲಾದ ನಂತರ ಕೃಷ್ಣ ಜೆ. ರಾವ್ ನಾಪತ್ತೆಯಾಗಿದ್ದರು. ಬಳಿಕ ಮೈಸೂರಿನಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿ ಕೃಷ್ಣ ಜೆ. ರಾವ್ ಅವರ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆ ಯುವತಿಯ ಪರವಾಗಿ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ShareTweetSendShare
Join us on:

Related Posts

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

by admin
August 3, 2026
0

  ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್  ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ....

anna-from-mexico-movie-release-date-dhananjay-shankar-guru

film- ಡಿಸೆಂಬರ್‌ 24ಕ್ಕೆ ತೆರೆಗೆ ಬರಲಿದೆ ಧನಂಜಯ್‌ ಅಭಿನಯದ ‘ಅಣ್ಣ ಫ್ರಮ್‌ ಮೆಕ್ಸಿಕೋ’: ಬರ್ತಿದೆ ‘ಬಡವ ರಾಸ್ಕಲ್’ ಹಿಟ್ ಕಾಂಬಿನೇಷನ್ !

by admin
August 3, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್‌ ಮೆಕ್ಸಿಕೋ’ (Anna From Mexico) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ....

allu-arjun-accident-insurance-1000-fans-aafa-summit-karnataka

film- ಅಭಿಮಾನಿಗಳ ಸುರಕ್ಷತೆಗೆ ಮುಂದಾದ ‘ಐಕಾನ್ ಸ್ಟಾರ್’; ಕರ್ನಾಟಕದ 150 ಮಂದಿ ಸೇರಿ ಸಾವಿರ ಫ್ಯಾನ್ಸ್‌ಗೆ ‘ಅಪಘಾತ ವಿಮೆ’ ಮಾಡಿಸಿದ ಅಲ್ಲು ಅರ್ಜುನ್!

by admin
August 3, 2026
0

ಹೈದರಾಬಾದ್: ತಮ್ಮ ನಟನೆ ಮತ್ತು ಅದ್ಭುತ ಡ್ಯಾನ್ಸ್ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್, ಇದೀಗ ತಮ್ಮ ಮಾನವೀಯ ನಡೆಯಿಂದ ಮತ್ತೊಮ್ಮೆ...

bhavantara-kannada-movie-modamodalidu-song-released-karthik-sharma-hombale-music

film- ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರದ ‘ಮೊದಮೊದಲಿದು’ ಮೆಲೋಡಿ ಹಾಡು ರಿಲೀಸ್‌

by admin
August 3, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಈಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ....

jana-nayagan-box-office-collection-thalapathy-vijay-kvn-productions-250-crore

film- ಬಾಕ್ಸ್ ಆಫೀಸ್‌ನಲ್ಲಿ ದಳಪತಿ ವಿಜಯ್ ‘ಜನ ನಾಯಗನ್’ ಅಬ್ಬರ: ₹250 ಕೋಟಿಗೂ ಹೆಚ್ಚು ಕಲೆಕ್ಷನ್!

by admin
August 3, 2026
0

ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಪೂರ್ಣಪ್ರಮಾಣದ ರಾಜಕೀಯಕ್ಕೆ ಧುಮುಕಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ, 'ದಳಪತಿ' ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram