ಹಿರಿಯ ಗಾಯಕ ಇಳಯರಾಜ(Ilaiyaraaja) ಅವರಿಗೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಭಾರೀ ಮೊತ್ತದ ಪರಿಹಾರ ನೀಡಿದೆ.
ಇಳಯರಾಜ ಸಂಗೀತ ಸಂಯೋಜನೆಯ ‘ಕಣ್ಮಣಿ’ ಹಾಡನ್ನು ಬಳಸಿದಕ್ಕೆ ದುಬಾರಿ ಹಣ ನೀಡಿದ್ದಾರೆ. ಮಂಜುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾದಲ್ಲಿ ಅನಧಿಕೃತವಾಗಿ ಹಾಡು ಬಳಸಿದ ಹಿನ್ನೆಲೆಯಲ್ಲಿ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಇಳಯರಾಜ ಬೇಡಿಕೆ ಇಟ್ಟಿದ್ದರು. ಆದರೆ, ಚಿತ್ರದ ನಿರ್ಮಾಪಕರು ವೈಯಕ್ತಿಕವಾಗಿ ಭೇಟಿಯಾಗಿ ಮಾತಕತೆ ನಡೆಸಿ 60 ಲಕ್ಷ ರೂ ಪಾವತಿಸಿದ್ದಾರೆ ಎನ್ನಲಾಗಿದೆ.
ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ತಂಡ ಯಾವುದೇ ಅನುಮತಿ ಇಲ್ಲದೆ ಬಳಕೆ ಮಾಡಿತ್ತು. ಹೀಗಾಗಿ ಇಳಯರಾಜ ಅವರು ಬೇಡಿಕೆ ಇಟ್ಟಿದ್ದರು.