ಬಂದೂಕಿನ ನಾಡಿನಲ್ಲಿ ಬೆಳೆದ ಸ್ಪೂರ್ತಿದಾಯಕ ಮಹಿಳೆ, ಕಾಶ್ಮೀರದ ಮೊದಲ ಐಪಿಎಸ್ ಅಧಿಕಾರಿ ರುವೇದ ಸಲಾಮ್ ನಿನಗೊಂದು ಸಲಾಂ..
ಚೆನ್ನೈ, ಜುಲೈ 10: ಡಾ.ರುವೇದ ಸಲಾಮ್, ಕಾಶ್ಮೀರದ ಕುಪ್ವಾರಾದ, ಹಳೆಯ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಜಮ್ಮು ಕಾಶ್ಮೀರ ಹೇಳಿ ಕೇಳಿ ಉಗ್ರರ ಅಡಗುತಾಣ . ಆದರೆ ಗುಂಡಿನ ಸದ್ದಿನ ನಡುವೆ ಈ ಹೆಣ್ಣುಮಗುವಲ್ಲಿ ಆಕೆಯ ತಂದೆ ಮುಂದೊಂದು ದಿನ ತನ್ನ ಮಗಳು ಐಪಿಎಸ್ ಅಧಿಕಾರಿ ಆಗಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ತಂದೆಯ ಆಸೆಯನ್ನು ನಿರಾಸೆಗೊಳಿಸದ ರುವೇದ ಸಲಾಮ್ ತನ್ನ ತಂದೆಯ ಕನಸಿನ ಗೋಪುರದ ಮುಡಿಗೆ ಕಲಶವನ್ನೇ ಇರಿಸಿದರು. ಆದರೆ ಅದೇನು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಜಮ್ಮು ಕಾಶ್ಮೀರದ ಹೆಣ್ಣು ಮಗಳು ಭಾರತ ದೇಶದ ಸೇವೆ ಸಲ್ಲಿಸುವುದು ಪ್ರತ್ಯೇಕತಾವಾದಿಗಳಿಗೆ ಇಷ್ಟವಿಲ್ಲದ ಕಾರ್ಯವಾಗಿತ್ತು. ಹಾಗಿರುವಾಗ ರುವೇದಾ ಎಂಬ ಕಾಶ್ಮೀರಿ ಹೆಣ್ಣು ಮಗಳು ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಾಧನೆ ಮೆರೆದ ಕಥೆ ಇಲ್ಲಿದೆ.
ತನ್ನ ಎರಡನೇ ಪ್ರಯತ್ನದಲ್ಲೇ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸಸ್ ಕಮಿಷನ್) ಪರೀಕ್ಷೆಯನ್ನು 2015 ರಲ್ಲಿ ತೇರ್ಗಡೆಗೊಳಿಸಿದ ರುವೇದ ಸಲಾಮ್ , ಕೇಡರ್ಗೆ ಅನುಗುಣವಾಗಿ ತರಬೇತಿಗೆ ಹೋಗಬೇಕಾಗುತ್ತದೆ. ರುವೇದ ಸಲಾಮ್ ಬಯಸಿದಂತೆ ಭಾರತೀಯ ಪೊಲೀಸ್ ಸೇವಾ ಕೇಡರ್ಗೆ ಆಯ್ಕೆಯಾಗುತ್ತಾರೆ. ನಂತರ ಹೈದರಾಬಾದ್ ನಲ್ಲಿ ತರಬೇತಿ ಮುಗಿಸಿ ಮುಂದೆ ತಮಿಳುನಾಡಿನ ಐಪಿಎಸ್ ಕೇಡರ್ಗೆ ಸೇರಿಕೊಂಡು, ಚೆನ್ನೈನಲ್ಲಿ ಸಹಾಯಕ ಪೊಲೀಸ್
ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ಈ ತರಬೇತಿ ತುಂಬಾ ಶ್ರಮದಾಯಕವಾಗಿತ್ತು ಮತ್ತು ದೈಹಿಕವಾಗಿ ಅದು ತುಂಬಾ ಕಷ್ಟಕರವಾಗಿತ್ತು ಎಂದು ರುವೇದ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿಕೊಂಡಿದ್ದಾರೆ.
ಮುಂದೆ ರುವೇದಾ ಉನ್ನತ ವ್ಯಾಸಂಗಕ್ಕೆ ವೈದ್ಯಕೀಯ ಕಾಲೇಜಿಗೆ ಸೇರಿದರು, ಮತ್ತು ಸಾಕಷ್ಟು ಸಮಯವನ್ನು ಓದಲು ಮೀಸಲಿಟ್ಟರು. ಜೊತೆಗೆ ಕಾಶ್ಮೀರ ರಾಜ್ಯ ಆಡಳಿತ ಸೇವಾ ಪರೀಕ್ಷೆಯನ್ನು ಪೂರ್ಣಗೊಳಿಸಲು ರುವೇದ ಸಮಯ ಮಾಡಿಕೊಂಡರು. ಮುುಂದೆ ವೈದ್ಯಕೀಯ ಸ್ನಾತಕೋತ್ತರ ಪದವಿ ಮಾಡುವ ಬದಲು, ರುವೇದ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು . ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಮುಗಿಸಿ ನಂತರ ಕನಸಿನ ಕೂಸಾದ 2015 ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸಸ್ ಕಮಿಷನ್) ಪರೀಕ್ಷೆಯನ್ನು 2015 ರಲ್ಲಿ ತನ್ನ ಎರಡನೇ ಪ್ರಯತ್ನದಲ್ಲೇ ತೇರ್ಗಡೆಗೊಳಿಸಿದರು. ಯುವ ಎಸಿಪಿಯಾಗಿ, ರುವೇದ ಯುವ ಜನಾಂಗಕ್ಕೆ, ಅದರಲ್ಲೂ, ವಿಶೇಷವಾಗಿ ಹುಡುಗಿಯರಿಗೆ ಪ್ರೇರಕ ಮಾತುಗಳನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐಪಿಎಸ್ ಪರೀಕ್ಷೆಗೆ ಹಾಜರಾಗುವಂತೆ ಯುವಜನಾಂಗವನ್ನು ಪ್ರೋತ್ಸಾಹಿಸಿದ್ದಾರೆ.
ರುವೇದ ಅವರ ಪಾತ್ರ ಸವಾಲಿನಿಂದ ಕೂಡಿದೆ ಮತ್ತು ಬಹಳಷ್ಟು ಜವಾಬ್ದಾರಿಯನ್ನು ಹೊಂದಿದೆ.
ಇದೀಗ ನಾವು ಪೊಲೀಸರನ್ನು ಗೌರವಿಸುವ ಮನಸ್ಥಿತಿಯನ್ನು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳು ನನ್ನನ್ನು ಸಮವಸ್ತ್ರದಲ್ಲಿ ನೋಡಿದಾಗ ಮೆಚ್ಚುಗೆಯಿಂದ ನೋಡುತ್ತಾರೆ. ಇತ್ತೀಚೆಗೆ ನಾನು ಹೈದರಾಬಾದ್ನಲ್ಲಿ ಬಾಲಕಿಯರಿಗಾಗಿ ಕಾರ್ಯಾಗಾರ ನಡೆಸಿದ್ದೆ. ಹಾಜರಿದ್ದ ಹುಡುಗಿಯರು ತಾವು ಕೂಡ ಐಪಿಎಸ್ಗೆ ಸೇರಲು ಬಯಸಿದ್ದೇವೆಂದು ಹೇಳಿದರು, ಆದರೆ ಅವರ ಪೋಷಕರು ಅವರನ್ನು ಬೆಂಬಲಿಸುತ್ತಾರೆಯೇ ಎಂಬ ಆತಂಕದಲ್ಲಿದ್ದರು ಎಂದು ರುವೇದಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ರುವೇದರ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಶಾಂತಿಯ ಅವಶ್ಯಕತೆ ಬಹಳನೇ ಇದೆ . ಭವಿಷ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಒಟ್ಟಿಗೆ ಸಾಗುತ್ತದೆ. ಇತರ ಪ್ರದೇಶಗಳಲ್ಲಿ ವಾಸಿಸುವುದರಿಂದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುವುದು ರುವೇದರ ಅಭಿಪ್ರಾಯ.
ಚೆನ್ನೈನಲ್ಲಿ ಎಸಿಪಿಯಾಗಿ ತನ್ನ ಪ್ರಸ್ತುತ ಕೆಲಸವನ್ನು ನಿರ್ವಹಿಸುತ್ತಿರುವ ಇವರು, ಬೆಳಿಗ್ಗೆ 7 ಗಂಟೆಗೆ ತನ್ನ ದಿನಚಾರಿಯನ್ನು ಪ್ರಾರಂಭಿಸುತ್ತಾರೆ. ಸಾಪ್ತಾಹಿಕ ಮತ್ತು ಮಾಸಿಕ ಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಾರೆ. ಇದಲ್ಲದೆ, ವಿಶೇಷವಾಗಿ ಮಹಿಳಾ ಸಬಲೀಕರಣದ ಅಗತ್ಯತೆ ಕುರಿತಾಗಿ ಮಹಿಳೆಯರಿಂದ ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸುತ್ತಾರೆ.
ಸಿಡ್ನಿಯಲ್ಲಿ ನಡೆದ ಜಿ -20 ರಾಷ್ಟ್ರಗಳ ಸಭೆಯಲ್ಲಿ ಯುವ -20 ಶೃಂಗಸಭೆಯಲ್ಲಿ ಪ್ರಬಂಧ ಮಂಡಿಸಲು ಭಾರತದಿಂದ ಆಯ್ಕೆಯಾದ ಐದು ಯುವ ಕಾರ್ಯಕರ್ತರಲ್ಲಿ ಅವರು ಒಬ್ಬರು. ಈಗ ಅವರು ಯುವ ಪೀಳಿಗೆಗೆ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಹುಡುಗಿಯರಿಗೆ ನಿಯಮಿತವಾಗಿ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದು, ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ.
ಭಾರತದ ವಿವಿಧ ಭಾಗಗಳಲ್ಲಿ ಕೆಲವೆಡೆ ಕಾಶ್ಮೀರಿ ಹುಡುಗಿಯ ಸ್ಥಾನಮಾನದ ಕಾರಣದಿಂದಾಗಿ ಅವರು ಭಾರತೀಯ ವಿರೋಧಿ ಎಂಬ ಗ್ರಹಿಕೆ ಹೊಂದಿದ್ದು, ಅವರ ವರ್ತನೆಯ ಮೂಲಕ ಅದನ್ನು ಬದಲಾಯಿಸಬಹುದು ಎಂದು ಅವರು ಭಾವಿಸಿದ್ದಾರೆ. ಕಾಶ್ಮೀರಿ ಹುಡುಗಿಯರು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ. ರುವೇದಾ ತನ್ನ ಸಾಮರ್ಥ್ಯವನ್ನು ತೋರಿಸುವ ಮೂಲಕ ಈ ಗ್ರಹಿಕೆಯನ್ನು ಬದಲಾಯಿಸಲು ಬಯಸುತ್ತಾನೆ. ಸಂತೋಷದ ಸಂಗತಿಯೆಂದರೆ, ದೇಶದಾದ್ಯಂತ ಹೆಚ್ಚಿನ ಜನರು ಅವರನ್ನು ಪ್ರೀತಿಯಿಂದ ತಮ್ಮವಳೆಂದು ಒಪ್ಪಿಕೊಂಡಿದ್ದಾರೆ. ಒಂದು ದೇಶವಾಗಿ ಸುಸ್ಥಿರ ಅಭಿವೃದ್ಧಿ ಮತ್ತು ವಿಶ್ವದಾದ್ಯಂತ ಯಶಸ್ಸನ್ನು ಸಾಧಿಸಲು ಈ ದೇಶದ ಪ್ರತಿಯೊಂದು ಮೂಲೆಯಿಂದ ಮತ್ತು ಸಮಾಜದಿಂದ ಹೆಚ್ಚು ಯುವ ಮತ್ತು ಉತ್ಸಾಹಿ ಭಾರತೀಯರು ಹೊರಬರಬೇಕು