ಮಂಗಳೂರು: ಶಾಂಬವಿ ನದಿಯಲ್ಲಿ ಈಜಲು ಹೋಗಿದ್ದ ಯುವತಿ, ಮೂವರು ಯುವಕರು ಸೇರಿದಂತೆ ನಾಲ್ವರು ನೀರುಪಾಲಾದ ಘಟನೆ ಮೂಡಬಿದರೆ ಬಳಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮದ ಶಾಂಭವಿ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಮೂಡುಶೆಡ್ಡೆಯ ನಿಖಿಲ್(18), ಹರ್ಷಿತಾ(20), ವೇಣೂರಿನ ಸುಭಾಸ್(19), ಬಜ್ಪೆಯ ರವಿ(30) ಮೃತ ದುರ್ದೈವಿಗಳು. ಪಾಲಡ್ಕ ಗ್ರಾಮದ ಶ್ರೀಧರಾಚಾರ್ ಎಂಬುವರ ಮನೆಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದಿದ್ದ ಈ ನಾಲ್ವರು ಶಾಂಭವಿ ನದಿಯಲ್ಲಿ ನದಿಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ.

ನಿನ್ನೆಯೂ ಸಹ ಇದೇ ನದಿಯಲ್ಲಿ ಈಜಾಡಿದ್ದರಂತೆ. ಈ ಹುಮ್ಮಸ್ಸಿನಿಂದ ನದಿಗೆ ಇಳಿದವರಿಗೆ ಆಳದ ಬಗ್ಗೆ ಗೊತ್ತಾಗದೆ ಈಜಲು ಆರಂಭಿಸಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದ ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿದ್ದಾರೆ, ಹೀಗೆ ಒಬ್ಬರಂತೆ ನಾಲ್ವರೂ ಒಬ್ಬರ ನಂತರ ರಕ್ಷಣೆ ಭರದಲ್ಲಿ ನೀರುಪಾಲಾಗಿದ್ದಾರೆ. ಆದರೆ, ದಡದಲ್ಲಿ ನೋಡುತ್ತಿದ್ದ ಮಕ್ಕಳು ನೀರಿಗೆ ಇಳಿಯದೇ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಾರೆ. ಆದರೆ ಅಷ್ಟರಲ್ಲೇ ನಾಲ್ವರೂ ನೀರಿನಲ್ಲಿ ಮುಳುಗಿ ಹೋಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನೀರುಪಾಲಾದ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೂಡಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








