ನವದೆಹಲಿ: ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ 43 ಯೋಧರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಚೀನಾ ಸರ್ಕಾರ ನಿರಾಕರಿಸಿದೆ.
ಕಳೆದ ಸೋಮವಾರದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಕಿರಿಕ್ ಮಾಡುತ್ತಿತ್ತು. ಈ ವೇಳೆ ಭಾರತ-ಚೀನಾ ಯೋಧರ ನಡುವೆ ಗುಂಡಿನ ಕಾಳಗ ನಡೆದು ಭಾರತದ 20 ಯೋಧರು ಮೃತಪಟ್ಟಿದ್ದಾರೆ. ಚೀನಾದ 43 ಯೋಧರು ಸೇರಿದಂತೆ ಅಪಾರ ಸಂಖ್ಯೆಯ ಸಾವು ನೋವು ಸಂಭವಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜೂ ಲಿಜಾನ್ ತಿಳಿಸಿದ್ದಾರೆ. ಗಡಿಯಲ್ಲಿ ಉಂಟಾಗಿರುವ ಸಂಘರ್ಷದ ವಾತಾವರಣವನ್ನು ರಾಜತಾಂತ್ರಿಕ ಹಾಗೂ ಸೇನಾ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಲಡಾಕ್ನ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ನಮಗೇ ಸೇರಿದ್ದು ಎಂಬ ಅರ್ಥದಲ್ಲಿ ಹೇಳಿರುವ ಜೂ ಲಿಜಾನ್, ಗಡಿಭದ್ರತಾ ಪಡೆಗಳು ಅಲ್ಲಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಪರಿಹರಿಸಿಕೊಳ್ಳಲಿವೆ ಎಂದಿದ್ದಾರೆ.
ಕೆಜಿಎಫ್ ಸ್ಮಾಷರ್ಶ್ ತಂಡದ ಸಾರಥಿ ಟೆಕ್ಕಿ ನವೀನ್ ಯಶೋಗಾಥೆ..!
ನವೀನ್.. ಕೆಜಿಎಫ್ ಸ್ಮಾಷರ್ಶ್ ತಂಡದ ಸಾರಥಿ. cmcup2026-kgfsmashers team ಯಶಸ್ವಿ ವೃತ್ತಿಜೀವನದ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಕ್ರೀಡಾ ಆಸಕ್ತಿಯನ್ನು ಸಮತೋಲನವಾಗಿ ಕಾಪಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಿಲ್ಲ. ಅದಕ್ಕೆ...








