ಅಹಂಕಾರದ ದಾನ
ರಾಜ್ಯವೊಂದರ ರಾಜ ಬಹಳ ಧರ್ಮಾತ್ಮ ಅವನು ಮಹಾದಾನಿ. ಆ ಬಗ್ಗೆ ಅವನಿಗೆ ಹೆಮ್ಮೆಯೂ ಇತ್ತು.
ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷಿಯರು ಫೇಸ್ ಬುಕ್, ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸುತ್ತಿರುವುದನ್ನು ಕಂಡು ಬಂದಿರುತ್ತದೆ
ಹಾಗಾಗಿ ಓದುಗರ ವಿನಂತಿ ಈ ಕೆಳಕಂಡ ಪೂನ್ ನಂಬರ್ ಕರೆ ಮಾಡಿ ವಿಳಾಸಕ್ಕೆ ಮಾತ್ರ ಭೇಟಿ ಮಾಡತಕ್ಕದ್ದು ತಪ್ಪದೆ ಕರೆ ಮಾಡಿ
85489998564
ಒಂದು ದಿನ ಆ ರಾಜನ ಅರಮನೆಗೆ ಮಹಾತ್ಮರೊಬ್ಬರು ಬಂದರು. ರಾಜ ಅವರನ್ನು ಹೃತ್ತೂರ್ವಕವಾಗಿ ಸ್ವಾಗತಿಸಿದ ನಂತರ ರಾಜ ವಿನೀತನಾಗಿ ಕೇಳಿದ:
“ಮಹಾತ್ಮರೆ, ಇಂದು ನೀವು ಕೇಳಿದ್ದನ್ನು ಕೊಡಬೇಕೆಂಬ ಇಚ್ಛೆ ನನಗಿದೆ. ದಯವಿಟ್ಟು
ಏನಾದರೂ ಕೇಳಿ.”
ಮುಗುಳ್ಳಕ್ಕಮಹಾತ್ಮರು, ‘ರಾಜ, ನಿನಗೆ ಒಳ್ಳೆಯದೆನಿಸುವುದನ್ನು ಕೊಡು,”ಎಂದರು.
“ರಾಜ್ಯದ ಸಮಸ್ತಭಾಂಡಾರ ತಮಗೆ ಅರ್ಪಿತ,”ಎಂದು ರಾಜ ಧನ್ಯತಾಭಾವದಿ೦ದ,
“ಈ ಭಂಡಾರ ಪ್ರಜೆಗಳದು. ನೀನು ಅದರ ಸಂರಕ್ಷಕ ಮಾತ್ರ,” ಮಹಾತ್ಮರು ಮರು ನುಡಿದರು.
“ಈ ಅರಮನೆ, ಆನೆ ಕುದುರೆಗಳು ನನ್ನದಲ್ಲವೆ ?ಅವುಗಳನ್ನು ನಿಮಗೆ ಕೊಡುವೆ. “ಮತ್ತೆ ಮರೆಯುತ್ತಿದ್ದೀ. ಇವೆಲ್ಲವೂ ಪ್ರಜೆಗಳದೇ, ಕೇವಲ ನಿನ್ನ ಅನುಕೂಲಕ್ಕಾಗಿ, ಆಡಳಿತಸಮರ್ಪಕವಾಗಿ ನಡೆಯಲೆಂದು ನಿನಗೆ ಕೊಡಲಾಗಿದೆ.”
ಹತಾಶನಾದ ರಾಜ ಯೋಚಿಸಿ ಹೇಳಿದ, “ಸ್ವಾಮಿ, ಈ ಶರೀರ ಕೇವಲ ನನ್ನದು. ಅದನ್ನೇ ತಮಗೆ ದಾನವಾಗಿ ನೀಡುವೆ.”
ನಸುನಕ್ಕ ಮಹಾತ್ಮರು, “ಶರೀರ ನಿನ್ನದೇ ಎಂಬುದು ನಿಜ. ಆದರೆ ಇದರ ಮೇಲೆ ನಿನ್ನ ಹೆಂಡತಿ ಮಕ್ಕಳ ಅಧಿಕಾರವಿದೆ. ನೀನೊಬ್ಬನೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗದು,’ಎಂದರು.
ರಾಜ ಈಗ ಗೊಂದಲದಲ್ಲಿ ಬಿದ್ದ. ಅವನ ಆತಂಕ ಕಂಡು ಕನಿಕರಪಟ್ಟ ಮಹಾತ್ಮರು, “ರಾಜ, ನಿನ್ನಲ್ಲಿರುವ ಅಹಂಕಾರ ಮಾತ್ರ ನಿನ್ನದು. ಬೇಕಿದ್ದರೆ ಅದನ್ನು ದಾನ ಮಾಡು,” ಎಂದಾಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು.ಮತ್ತೆಂದೂ ಆತನಲ್ಲಿ ಅಹಂಕಾರ ಇಣುಕಲಿಲ್ಲ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564







