ಮೇಕೆದಾಟು ಪಾದಯಾತ್ರೆ ಚುನಾವಣೆ ಗಿಮಿಕ್ ಮಾತ್ರ: ಎಸ್ ಟಿ ಸೋಮಶೇಖರ

1 min read
S.T Somshekar Saaksha tv

ಮೇಕೆದಾಟು ಪಾದಯಾತ್ರೆ ಚುನಾವಣೆ ಗಿಮಿಕ್ ಮಾತ್ರ: ಎಸ್ ಟಿ ಸೋಮಶೇಖರ Saaksha Tv

ಮೈಸೂರು: ಕಾಂಗ್ರೆಸ ಮೇಕೆದಾಟು ಪಾದಯಾತ್ರೆ ವಿಚಾರವನ್ನು ಕೈ ಬಿಡಬೇಕು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ಗೆ ಮಾಡಲು ಏನು ಕೆಲಸ ಇಲ್ಲ. ಪಾದಯಾತ್ರೆ ಒಂದು ಚುನಾವಣಾ ಗಿಮಿಕ್ ಮಾತ್ರ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದರು.

Mekedatu Saaksha Tv

ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಬೇಕು. ಕೊರೊನಾ ಒಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಬೇರೆ ರಾಜ್ಯಗಳಲ್ಲಿ ವಿದೇಶದಲ್ಲೂ ಪ್ರಕರಣ ಹೆಚ್ಚಾಗಿವೆ, ಎರಡನೇ ಅಲೆಯಲ್ಲಿ ಸಾಕಷ್ಟು ಅನಾಹುತವಾಗಿವೆ. ಮತ್ತೆ ಮೂರನೇ ಅಲೆಯಲ್ಲಿ ಮರುಕಳಿಸಬಾರು ಎಂದು ನುಡಿದರು.

ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ಪಾದಯಾತ್ರೆಯನ್ನು ಇಗಲೇ ಕೈ ಬಿಡಬೇಕು. ಇಷ್ಟು ವರ್ಷ ಅವರು ಯಾವುದೆ ಕಾರ್ಯವನ್ಜು ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಯೋಜನೆ ಬಗ್ಗೆ ಮಾತನಾಡಲಿಲ್ಲ. ಈಗ ರಾಜಕೀಯ ಕಾರಣಕ್ಕೆ ಪಾದಯಾತ್ರೆ ಗಿಮಿಕ್ ಮಾಡುತ್ತಿದ್ದಾರೆ ಅಷ್ಟೇ. ಜನರಿಗೆ ಇದು ಅರ್ಥವಾಗುತ್ತದೆ ಎಂದು ಗುಡುಗಿರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd