ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಹಾನದಿ ಗರ್ಭ ಸೇರಿದ್ದ ದೇವಳ ಗೋಚರ: ಇದು ಲಾಕ್‍ಡೌನ್ ಎಫೆಕ್ಟ್

saaksha tv by saaksha tv
June 13, 2020
in Newsbeat, ಎಸ್ ಸ್ಪೆಷಲ್, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಭುವನೇಶ್ವರ: ಒಡಿಸ್ಸಾ ರಾಜ್ಯದ ಮಹಾನದಿಯ ಗರ್ಭದಲ್ಲಿ ಹುದುಗಿಹೋಗಿದ್ದ ಐದು ಶತಮಾನಗಳ ಹಿಂದಿನ ದೆವಸ್ಥಾನವೊಂದು ಪ್ರತ್ಯಕ್ಷವಾಗಿದ್ದು, ಇದು ಸಾಧ್ಯವಾಗಿದ್ದ ಕೊರೊನಾದಿಂದಾಗಿ ಉಂಟಾದ ಲಾಕ್‍ಡೌನ್ ಎಫೆಕ್ಟ್.

ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿತ್ತು. ಇದರ ಪರಿಣಾಮ ಜನರು ಮನೆ ಸೇರಿದರು. ವಾಹನಗಳು ಉಗುಳುತ್ತಿದ್ದ ಹೊಗೆ ಕಡಿಮೆಯಾಯಿತು. ಕೈಗಾರಿಕೆಗಳು ವಿಷಕಾರಿ ಹೊಗೆ ನಿಲ್ಲಿಸಿದವು. ಬೃಹತ್ ನಗರಗಳಿಂದಾಗಿ ಕಲುಷಿತಗೊಂಡಿದ್ದ ಜೀವನದಿಗಳು ಕೊಳಕು ತೊಳೆದುಕೊಂಡ ನಿರ್ಮಲಗೊಂಡವು. ಉಸಿರಾಡುತ್ತಿದ್ದ ಗಾಳಿ ಶುದ್ಧವಾಯಿತು. ರಂಧ್ರವಾಗಿದ್ದ ಓಝೋನ್ ಪದರ ಮುಚ್ಚಿಕೊಂಡಿತು. ಇದೆಲ್ಲಾ ಆಗಿದ್ದು ಕೊರೊನಾ ವೈರಸ್ ಎಂಬ ಸೂಕ್ಷ್ಮಾಣು ಜೀವಿಗೆ ಹೆದರಿ ಜಗತ್ತಿನೆಲ್ಲೆಡೆ ಮಾಡಲಾದ ಲಾಕ್‍ಡೌನ್ ಪ್ರತಿಫಲ.

Related posts

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

August 12, 2026
ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

August 12, 2026

ಇದಕ್ಕೆ ಇನ್ನೊಂದು ಸೇರ್ಪಡೆ ಮಹಾನದಿ. ಒಡಿಸ್ಸಾ ರಾಜ್ಯದ ನಯಾಗರ ಜಿಲ್ಲೆಯಲ್ಲಿ ಹರಿಯುವ ಮಹಾನದಿ, ತನ್ನ ರೌದ್ರತೆಯಿಂದಲೇ ಹೆಸರುವಾಸಿ. ಚತ್ತೀಸ್‍ಗಡದಲ್ಲಿ ಹುಟ್ಟಿ ಒಡಿಸ್ಸಾ ರಾಜ್ಯದ ಮೂಲಕ ಬಂಗಾಳಕೊಲ್ಲಿ ಸೇರುವ ಮಹಾನದಿ, ತನ್ನ ಒಡಲೊಳಗೆ ಅದೆಷ್ಟೋ ಸಂಗತಿಗಳಲ್ಲಿ ಸೇರಿಸಿಕೊಂಡಿದೆ. ಮಹಾನದಿಯ ಅಬ್ಬರಕ್ಕೆ ನದಿಯೊಡಲು ಸೇರಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ಗೋಪಿನಾಥ ಮಂದಿರದ ಅವಶೇಷಗಳು ಕಾಣಲಾರಂಭಿಸಿದೆ.

11 ವರ್ಷದ ಬಳಿಕ ಕಂಡ ದೇಗುಲ
ಮಹಾನದಿ ಒಡಿಸ್ಸಾ ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾಗಿರುವ ಮಹಾನದಿ ಚತ್ತೀಸ್‍ಗಡದಲ್ಲಿ ಉಗಮಗೊಂಡು ನಯಾಗರಂ ಮಾರ್ಗವಾಗಿ ಕಟಕ್ ಜಿಲ್ಲೆ ಮೂಲಕ ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ. ಮಹಾನದಿಗೆ ಕಟಕ್ ನಗರದ ಬಳಿ ಬೃಹತ್ ಜಲಾಶಯ ನಿರ್ಮಿಸಲಾಗಿದ್ದು, ಕಟಕ್ ಡ್ಯಾಂ ಎಂದೇ ಪ್ರಸಿದ್ದಿಯಾಗಿದೆ.
ವರ್ಷದ ಹಲವು ದಿನಗಳಲ್ಲಿ ಮಹಾನದಿ ಸೊಕ್ಕಿನಿಂದಲೇ ಹರಿಯುತ್ತದೆ. ಇದರ ಆರ್ಭಟಕ್ಕೆ ಹತ್ತಾರು ಹಳ್ಳಿಗಳು ಕಾಲನ ಗರ್ಭದೊಳಗೆ ಸೇರಿಹೋಗಿವೆ. ಇದರಲ್ಲಿ ವಿಷ್ಣುದೇವಾಲಯಗಳಲ್ಲಿ ಒಂದಾದ ಗೋಪಿನಾಥ ಮಂದಿರವೂ ಒಂದು.

ಮಹಾನದಿಯ ಅಬ್ಬರ ಕಡಿಮೆಯಾಗಿ ಸ್ವಚ್ಚವಾಗಿ ಹರಿಯುತ್ತಿದೆ. ಈ ವೇಳೆ ಗೋಪಿನಾಥ ಮಂದಿರದ ಅವಶೇಷಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಸಂಶೋಧಕರ ತಂಡ, ಇದು ಗೋಪಿನಾಥ ಮಂದಿರ ಎಂದು ಪತ್ತೆಹಚ್ಚಿದ್ದಾರೆ.

60 ಅಡಿ ಆಳದ ನದಿಯಲ್ಲಿ ಮುಳುಗಿದ ದೇವಸ್ಥಾನ
ಗೋಪಿನಾಥ ಮಂದಿರ 1500ರಿಂದ 1600 ಅವಧಿಯಲ್ಲಿ ಕಟ್ಟಿರಬಹುದು ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು. ನಯಾಗರ ಜಿಲ್ಲೆಯ ಪದ್ಮಾವತಿ ಗ್ರಾಮದ ಬಳಿ ಗೋಪಿನಾಥ ಮಂದಿರ ಪತ್ತೆಯಾಗಿದೆ. ಪದ್ಮಾವತಿ ಗ್ರಾಮವಿರುವ ಪ್ರದೇಶವನ್ನು ಸತಪಠಾಣ ಎನ್ನಲಾಗುತ್ತದೆ. ಅಂದರೆ, 7 ಹಳ್ಳಿಗಳನ್ನು ಹೊಂದಿರುವ ಪ್ರದೇಶ ಹೊಂದಿರುವುದಕ್ಕೆ ಈ ಹೆಸರು ಬಂದಿದೆ.
ಪದ್ಮಾವತಿ ಗ್ರಾಮದ ಸುತ್ತಮುತ್ತ ಹರಿಯುವ ಮಹಾನದಿಯಲ್ಲಿ 22 ದೇವಸ್ಥಾನಗಳು ಮುಳುಗಿ ಹೋಗಿವೆ ಎನ್ನುತ್ತಾರೆ ಗ್ರಾಮಸ್ಥರು. ಆದರೆ, ಆ 22 ದೇವಸ್ಥಾನಗಳು ಯಾವುವೂ ಕಾಣಿಸುವುದಿಲ್ಲ. ಆದರೆ, ಗೋಪಿನಾಥ ಮಂದಿರದ ಶಿಖರದ ಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ.
11 ವರ್ಷಗಳ ಹಿಂದೆ ಗೋಪಿನಾಥ ಮಂದಿರದ ಶಿಖರಭಾಗ ಕಾಣಿಸಿಕೊಂಡಿತ್ತು ಎನ್ನುತ್ತಾರೆ ಗ್ರಾಮಸ್ಥರು. ನದಿಯ ಮೇಲ್ಮೈನಿಂದ 60 ಅಡಿ ಆಳದಲ್ಲಿ ದೇವಸ್ಥಾನ ಹುದುಗಿ ಹೋಗಿದೆ ಎಂದರೆ ಮಹಾನದಿಯ ಅಬ್ಬರ ಎಷ್ಟು ಎಂಬುದು ಅರ್ಥವಾಗುತ್ತದೆ.

150 ವರ್ಷಗಳ ಹಿಂದೆ ಮುಳುಗಿದ ಮಂದಿರ
19ನೇ ಶತಮಾತನದಲ್ಲಿ ಉಂಟಾದ ಮಹಾ ಪ್ರವಾಹದಿಂದಾಗಿ ಗೋಪಿನಾಥ ಮಂದಿರ ಮಹಾನದಿಯಲ್ಲಿ ಮುಳುಗಿ ಹೋಗಿದೆ ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು. ಅಂದರೆ, ಇಂದಿಗೆ ಸುಮಾರು 150 ವರ್ಷಗಳ ಹಿಂದೆ ಬಂದಿದ್ದ ಪ್ರವಾಹದಲ್ಲಿ ಗೋಪಿನಾಥ ಮಂದಿರ ಸಂಪೂರ್ಣ ಮುಳುಗಿದೆ.
ನೆಲ ಮಟ್ಟದಿಂದ 60 ಎತ್ತರವಿದ ಗೋಪಿನಾಥ ಮಂದಿರ ಕಣ್ಣಿಗೆ ಕಾಣದಂತೆ ನದಿಯಲ್ಲಿ ಮುಳುಗಿ ಹೋಗಿದೆ ಅಂದರೆ ಅಂದು ಬಂದಿದ್ದ ಮಹಾ ಪ್ರವಾಹ ಎಷ್ಟು ಪ್ರಭಲವಾಗಿತ್ತು ಎಂದು ಊಹಿಸಬಹುದಾಗಿ ಎನ್ನು ಸಂಶೋಧಕರು ತಿಳಿಸಿದ್ದಾರೆ.
25 ವರ್ಷಗಳ ಹಿಂದೆಯೂ ಇದೇ ಜಾಗದಲ್ಲಿ ದೇವಸ್ಥಾನದ ಕುರುಹು ಗ್ರಾಮಸ್ಥರಿಗೆ ಗೋಚರಿಸಿತ್ತಂತೆ. ಆದಾದ ಬಳಿಕ ಇಷ್ಟು ಕ್ಲಿಯರ್ ಆಗಿ ಕಾಣಿಸಿಕೊಂಡಿದ್ದು ಈಗ. ದೇವಸ್ಥಾನ ನೋಡಲು ಗ್ರಾಮಸ್ಥರು ಕೂಡ ಹೋಗಬಾರದು ಎಂದು ಎಚ್ಚರಿಸುತ್ತಾರೆ ಸಂಶೋಧಕರು.
ಒಟ್ಟಾರೆ, ಕಾಲದ ಗರ್ಭದಲ್ಲಿ ಅದೆಷ್ಟು ಮಂದಿರಗಳು ಹುದುಗಿವೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ ಎನ್ನುವುದು ಪುರಾತತ್ವ ಅಧಿಕಾರಿಗಳ ಮಾತು.

Tags: bhuvaneswarLockdownTemple
ShareTweetSendShare
Join us on:

Related Posts

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

by Shwetha
August 12, 2026
0

ಹೊಸ ದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ...

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

by Shwetha
August 12, 2026
0

ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಶಾಕ್ ಎದುರಾಗಿದೆ....

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

by Shwetha
August 12, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 59ನೇ CCH ನ್ಯಾಯಾಲಯ ಆಗಸ್ಟ್ 18ಕ್ಕೆ ಮುಂದೂಡಿದೆ....

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

by Shwetha
August 12, 2026
0

ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಲೂಟಿ ಮಾಡಿದ ಬಿ ನಾಗೇಂದ್ರ ರಾಜೀನಾಮೆಗೆ ಪಟ್ಟು. ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ!...

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

by Shwetha
August 12, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ನೀರು ಹರಿಸುವ ಕುರಿತು ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ, ಕರ್ನಾಟಕಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram