ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 2,454 ಹುದ್ದೆಗಳನ್ನು 2 ಹಂತದಲ್ಲಿ ಹೊಸದಾಗಿ ಸೃಜಿಸಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿ ಆದೇಶಿಸಿದೆ. ಅಲ್ಲದೇ, ಓರ್ವ ಎಸಿಪಿ, 10 ಇನ್ಸ್‌ಪೆಕ್ಟರ್, 6 ಸಬ್ ಇನ್ಸ್ಪೆಕ್ಟರ್, 26 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 46 ಹೆಡ್ ಕಾನ್ಸ್‌ಟೇಬಲ್, 142 ಕಾನ್ಸ್‌ಟೇಬಲ್ ಸಹಿತ 231 ಸಿಬ್ಬಂದಿ ನೇಮಕ ಜೊತೆಗೆ ಎರಡು ನೂತನ ಸಂಚಾರ ಠಾಣೆ ಆರಂಭ ಮಾಡಲು ಸರ್ಕಾರ ಆದೇಶ ನೀಡಿದೆ.
ಸಂಚಾರ ಠಾಣೆಗೆ ಇನ್ಸ್‌ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 44 ಹೆಡ್ ಕಾನ್ಸ್‌ಟೇಬಲ್, 88 ಕಾನ್ಸ್‌ಟೇಬಲ್ ಸಹಿತ 170 ಸಿಬ್ಬಂದಿಗಳ ನೇಮಕ ಹಾಗೂ ಡಿವಿಷನ್‌ಗೆ ಒಂದರಂತೆ ಮಹಿಳಾ ಠಾಣೆ ನಿರ್ಮಿಸಲು ಆದೇಶಿಸಲಾಗಿದೆ.
ಮಹಿಳಾ ಠಾಣೆಗೆ ಆರು ಇನ್ಸ್‌ಪೆಕ್ಟರ್, 24 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 144 ಕಾನ್ಸ್‌ಟೇಬಲ್ ಸಹಿತ ಒಟ್ಟು 246 ಸಿಬ್ಬಂದಿ, ಸಿಇಎನ್ ಠಾಣೆಗಳಿಗೆ 16 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 116 ಕಾನ್ಸ್‌ಟೇಬಲ್ ಸಹಿತ ಒಟ್ಟು 204 ಸಿಬ್ಬಂದಿ ಜೊತೆಗೆ ಸೈಬರ್ ಕ್ರೈಂ ಠಾಣೆಗಳಿಗೆ ಓರ್ವ ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್, 4 ಸಬ್ ಇನ್ಸ್ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 8 ಹೆಡ್ ಕಾನ್ಸ್‌ಟೇಬಲ್, 16 ಕಾನ್ಸ್‌ಟೇಬಲ್ ಸೇರಿದಂತೆ 35 ಜನ ಸಿಬ್ಬಂದಿ ಇರುವಂತೆ ನೋಡಿಕೊಳ್ಳಲು ಆದೇಶ ನೀಡಲಾಗಿದೆ.