ನ್ಯೂಸ್ ಡೆಸ್ಕ್ : ದೇಶದಲ್ಲಿ ಕೊರೊನಾಸುರ ತನ್ನ ಕದಂಬ ಬಾಹುಗಳನ್ನು ಚಾಚಿದ್ದಾನೆ. ದಿನ ದಿಂದ ದಿನಕ್ಕೆ ಕೊರೊನಾ ಸೋಂಕಿ ಕೇಸಸ್ ಗಳು ಹೆಚ್ಚಾಗುತ್ತಿವೆ. ಕೊರೊನಾ ಸಂಕಷ್ಟವನ್ನು ವರವನ್ನಾಗಿ ಮಾಡಿಕೊಂಡ ಬಹುತೇಕ ಖಾಸಗಿ ಆಸ್ಪತ್ರೆಗಳು ಹಣ ವಸೂಲಿಗೆ ನಿಂತಿವೆ.
ರಾಜ್ಯದಲ್ಲಿ ಪ್ರತಿನಿತ್ಯ ಶತಕದ ಗಡಿ ದಾಟಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ಲಾಭ ಪಡೆಯಲು ಖಾಸಗಿ ಆಸ್ಪತ್ರೆಗಳು ಮುಂದಾಗಿವೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳು ಪಡೆಯುತ್ತಿವೆ. ಇದರಿಂದ ಸಾಮಾನ್ಯ ಜನರಿಗೆ ಚಿಕಿತ್ಸೆ ಮರೀಚಿಕೆಯಾಗಿದೆ. ಆ ಹಿನ್ನೆಯಲ್ಲಿ ಸರ್ಕಾರವೇ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಎಷ್ಟು ಹಣ ಪಡೆಯಬೇಕು ಎಂದ ದರ ನಿಗದಿ ಮಾಡಿದೆ.
ರಾಜ್ಯ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆಂದು ಟಾಸ್ಕ್ ಪೋರ್ಸ್ ರಚನೆ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಹಣ ಪಡೆಯುತ್ತಿರುವ ಘಟನೆಗಳು ಟಾಸ್ಕ್ ಪೋರ್ಸ್ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅಧ್ಯಕ್ಷತೆ ಸಭೆಯಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆದಿದೆ. ಸಭೆ ಸುದೀರ್ಘವಾಗಿ ಚರ್ಚೆ ಮಾಡಿ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಎಷ್ಟು ಹಣ ಪಡೆಯಬೇಕೆಂದು ಟಾಸ್ಕ್ ಪೋರ್ಸ್ ದರ ನಿಗದಿ ಮಾಡಿದೆ.
ಟಾಸ್ಕ್ ಪೋರ್ಸ್ ದರ ನಿಗದಿ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ನಿಗದಿ ಮಾಡಿದ ದರ ಜಾರಿಯಾಗಬೇಕಾದರೆ ಕ್ಯಾಬಿನೆಟ್ ನಲ್ಲಿ ಅಂತಿಮವಾಗಬೇಕಿದೆ. ಜೂನ್ 25 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಭೆಯಲ್ಲಿ ದರ ನಿಗದಿ ಬಗ್ಗೆ ಅಂತಿಮ ತೀರ್ಮಾನವಾಗಬೇಕಿದೆ.
ದರ ನಿಗದಿ ಹೇಗೆ
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳು ಪಡೆಯ ಬೇಕಾದ ದರದ ಬಗ್ಗೆ ಈಗಾಗಲೇ ಬೇರೆ ರಾಜ್ಯಗಳು ತೀರ್ಮಾನ ಮಾಡಿವೆ. ಆ ಪ್ರಕಾರ ದರ ಜಾಲ್ತಿಯಲ್ಲಿದೆ. ಆದರೆ ರಾಜ್ಯದಲ್ಲಿ ದರ ನಿಗದಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ.
ರಾಜ್ಯದಲ್ಲಿ ಆಯುಷ್ಮನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಮತ್ತು ನಗದು ವಿಮಾ ಯೋಜನೆಯಡಿಯಲ್ಲಿ ದರ ನಿಗದಿ ಮಾಡಲಾಗಿದೆ. ಟಾಸ್ಕ್ ಪೋರ್ಸ್ ಸರ್ಕಾರಕ್ಕೆ ಮಾಡಿದ ಶಿಫಾರಸ್ಸಿನ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೊರೊನಾ ಟೆಸ್ಟ್ ಗೆ 2600 ರೂಪಾಯಿ ಹಣ ಪಡೆಯಬಹದಾಗಿದೆ.
ಯಾವ ಯೋಜನೆಯಡಿಯಲ್ಲಿ ಎಷ್ಟು ದರ ನಿಗದಿ
ಆಯುಷ್ಮನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ನಿಗದಿಯಾದ ದರ
ಜನರಲ್ ವಾರ್ಡ್ – 5200
ವಿತ್ ಆಕ್ಸಿಜನ್ ವಾರ್ಡ್ – 7000
ಐಸಿಯು ವಾರ್ಡ್ – 8500
ಐಸಿಯು ವಿತ್ ವೆಂಟಿಲೇಟರ್ ವಾರ್ಡ್ – 10000
ನಗದು – ವಿಮಾ ಯೋಜನೆಯಡಿಯಲ್ಲಿ ನಿಗದಿಯಾ ದರ
ಜನರಲ್ ವಾರ್ಡ್ -10000
ವಿತ್ ಆಕ್ಸಿಜನ್ ವಾರ್ಡ್ – 12000
ಐಸಿಯು ವಾರ್ಡ್ – 15000
ಐಸಿಯು ವಿತ್ ವೆಂಟಿಲೇಟರ್ ವಾರ್ಡ್ – 25000








