ಬೆಂಗಳೂರು, ಮೇ 28 : ಈ ತಿಂಗಳ ಅಂತ್ಯಕ್ಕೆ ಲಾಕ್ ಡೌನ್ 4.0 ಅವಧಿ ಮುಕ್ತಾಯವಾಗಲಿದೆ. ಜೂನ್ 1 ರ ನಂತರ ಜಿಮ್ ಮತ್ತು ರೆಸ್ಟೋರೆಂಟ್ ಮಾಲೀಕರು ಕೆಲಸ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಜೂನ್ 1ರ ನಂತರವೂ ಜಿಮ್ ಮತ್ತು ರೆಸ್ಟೋರೆಂಟ್ ತೆರೆಯುವುದಿಲ್ಲ ಎಂದು ಸಚಿವ ಆರ್ ಅಶೋಕ ತಿಳಿಸಿದ್ದು, ಜಿಮ್, ರೆಸ್ಟೋರೆಂಟ್ ಮಾಲೀಕರಿಗೆ ನಿರಾಸೆಯಾಗಿದೆ.
ವಿಧಾನಸೌದದಲ್ಲಿ ಮಾತನಾಡಿದ ಆರ್. ಅಶೋಕ್, ‘ಕೋವಿಡ್-19 ಜೊತೆ ಬದುಕುವುದು ಅನಿವಾರ್ಯವಾಗಿದೆ. ಲಾಕ್ ಡೌನ್ ಸಡಿಲಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಇದೆ. ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದೇವೆ ಎಂದರು.
ಇದೇ ವೇಳೆ ಹೋಟೆಲ್, ಜಿಮ್ ಆರಂಭಿಸುವ ಬಗ್ಗೆ ಮಾತನಾಡಿದ ಅವರು, ಜೂನ್ 1ರ ಬಳಿಕ ಹೋಟೆಲ್ ಗಳು ಓಪನ್ ಆಗಬಹುದು. ಆದ್ರೆ ಜಿಮ್ ಗಳು ತೆರೆಯುವುದಿಲ್ಲ. ಬಾರ್ ಆಂಡ್ ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ ಎಂದು ತಿಳಿಸಿದ್ದಾರೆ.








