ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಟೆನಿಸ್ ಜಗತ್ತಿನ ಸುರಸುಂದರಿಯರು..!

1 min read
Tennis Stars In Swimsuit sharapova saakshatv

ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಟೆನಿಸ್ ಜಗತ್ತಿನ ಸುರಸುಂದರಿಯರು..!

Anna Kournikova saakshatv tennisವಿಶ್ವ ಮಹಿಳಾ ಟೆನಿಸ್. ಇಲ್ಲಿ ಬರೀ ಆಟ ಮಾತ್ರ ಅಲ್ಲ. ಗ್ಲ್ಯಾಮರ್ನಲ್ಲೂ ಆಟಗಾರ್ತಿಯರು ಹೆಚ್ಚು ಜಾಲ್ತಿಯಲ್ಲಿದ್ದಾರೆ. ಚೆಂದದ ಚೆಂದುಳ್ಳಿಯರು ತಮ್ಮ ಆಟದ ವೈಖರಿಯ ಜೊತೆ ಚೆಲುವಿನಿಂದಲೂ ಟೆನಿಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಪ್ರತಿಮ ಸೌಂದರ್ಯದಿಂದ ಜಾಹಿರಾತು ಕಂಪೆನಿಗಳ ಅಚ್ಚುಮೆಚ್ಚಿನ ಕ್ರೀಡಾ ರೂಪದರ್ಶಿಯರು ಕೂಡ ಆಗಿದ್ದಾರೆ. ಬಿಕಿನಿ, ಸ್ವಿಮ್ ಸೂಟ್ನಲ್ಲಿ ಕಾಣಿಸಿಕೊಂಡಿರುವ ಮಹಿಳಾ ಟೆನಿಸ್ ಆಟಗಾರ್ತಿಯರು ಹಲವು ಮ್ಯಾಗಝೀನ್ ಮತ್ತು ಪತ್ರಿಕೆಗ¼ ಮುಖಪುಟದಲ್ಲೂ ರಾರಾಜಿಸಿದ್ದಾರೆ. ಅನ್ನಾ ಕೊರ್ನಿಕೊವಾದಿಂದ ಹಿಡಿದು ಸ್ಟೆಫಿಗ್ರಾಫ್ ತನಕ ವಿಶ್ವ ಟೆನಿಸ್ನ ಹಾಟೆಸ್ಟ್ ಫೀಮೆಲ್ ಟೆನಿಸ್ ಪ್ಲೇಯರ್ ಲೀಸ್ಟ್ ಇಲ್ಲಿದೆ ನೋಡಿ.

ಅನ್ನಾಕೊರ್ನಿಕೊವಾ – ರಷ್ಯಾದ ಟೆನಿಸ್ ಆಟಗಾರ್ತಿ. ಪ್ರಶಸ್ತಿ ಗೆದ್ದಿರುವ ಸಂಖ್ಯೆ ಜಾಸ್ತಿ ಏನು ಇಲ್ಲ. ಆದ್ರೆ ತಮ್ಮ ಅಪ್ರತಿಮ ಸೌಂದರ್ಯದಿಂದಲೇ ಟೆನಿಸ್ ಜಗತ್ತಿನಲ್ಲಿ ಮೋಡಿ ಮಾಡಿರುವ ಆಟಗಾರ್ತಿ. 2004ರಲ್ಲಿ ಸ್ವೀಮ್ ಸೂಟ್ ನಲ್ಲಿ ಕಾಣಿಸಿಕೊಂಡಿರುವ ಅನ್ನಾ ಕೊರ್ನಿಕೊವಾ, ಪೀಪಲ್ ಮ್ಯಾಗಝೀನ್ನ ಟಾಪ್ 50 ಸುಂದರಿಯರ ಪೈಕಿ ಒಬ್ಬರಾಗಿದ್ದಾರೆ. ಹಾಗೇ ಇಎಸ್ಪಿಎನ್ನ ಹಾಟೆಸ್ಟ್ ಫೀಮೆಲ್ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Elina Svitolina saakshatv tennisಮರಿಯಾ ಕಿರಿಲೆಂಕೊ – ಈಕೆ ಕೂಡ ರಷ್ಯಾದ ಟೆನಿಸ್ ಆಟಗಾರ್ತಿ. ಟೆನಿಸ್ ಅಂಗಣದಲ್ಲಿ ಸುದ್ದಿಯಾಗಿದ್ದು ಅಷ್ಟಕ್ಕಷ್ಟೇ. ಅದ್ರೆ ಸುಂದರಿಯರ ಪಟ್ಟಿಯಲ್ಲಿ ಮಾತ್ರ ಮುಂಚೂಣಿಯಲ್ಲಿದ್ರು.
ಅನ್ನಾ ಇವಾನೊವಿಕ್ – ಸರ್ಬಿಯಾದ ಟೆನಿಸ್ ಆಟಗಾರ್ತಿ. ಅದ್ಭುತ ಆಟದ ಜೊತೆ ಗ್ಲ್ಯಾಮರ್ ಜಗತ್ತಿನಲ್ಲೂ ಹೆಚ್ಚು ಸುದ್ದಿಯಾಗಿದ್ದ ಟೆನಿಸ್ ಆಟಗಾರ್ತಿ. ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಅನ್ನಾ ಇವಾನೊವಿಕ್ 2008ರಲ್ಲಿ ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿಯಾಗಿಯೂ ಹೊರಹೊಮ್ಮಿದ್ರು.

ಮರಿಯಾ ಶರಪೋವಾ– ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ. ಗ್ರ್ಯಾಂಡ್ ಸ್ಲ್ಯಾಂ ಮತ್ತು ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮರಿಯಾ ಶರಪೋವಾ  ಕೂಡ ಟೆನಿಸ್ ರಂಗದ ಚೆಂದುಳ್ಳಿ ಚೆಲುವೆ. ಐದು ಗ್ರ್ಯಾಂಡ್ ಸ್ಲ್ಯಾಂ ಟೆನಿಸ್ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಶರ್ಪಿ, ಸ್ವಿಮ್ ಸೂಟ್ ನಲ್ಲೂ ಕಾಣಿಸಿಕೊಂಡಿದ್ದರು.

ಗಾಬ್ರಿಯೆಲಾ ಸೆಬಾಟಿನಿ – ದಕ್ಷಿಣ ಅಮೆರಿಕಾದ ಟೆನಿಸ್ ಆಟಗಾರ್ತಿ. 1980ರ ದಶಕದ ಹಾಟೆಸ್ಟ್ ಫೀಮೆಲ್ ಟೆನಿಸ್ ಪ್ಲೇಯರ್ ಕೂಡ ಹೌದು.
ಯ್ಯುಗೆನಿಯ್ ಬೌಚರ್ಡ್ – ಕೆನಡಾ ಟೆನಿಸ್ ಆಟಗಾರ್ತಿ. 2014ರ ವಿಂಬಲ್ಡನ್ ಟೂರ್ನಿಯ ಫೈನಲ್ನಲ್ಲಿ ಆಡಿದ್ದರು. ಈಕೆ ಕೂಡ ಟೆನಿಸ್ ಮೈದಾನದಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಆದ್ರೆ ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದ್ದರು.

mariya sharapova saakshatv tennisಕರೋಲಿನಾ ವೋಜ್ನಿಯಾಕಿ – ಡೆನ್ಮಾಕ್ರ್ನ ಆಟಗಾರ್ತಿ. ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಕರೋಲಿನಾ ವೋಜ್ನಿಯಾಕಿ ಕೂಡ ಸ್ವಿಮ್ ಹಾಕೊಂಡು ಹಾಟೆಸ್ಟ್ ಟೆನಿಸ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ.

ಟಾಟಿಯಾನ ಗೊಲೊವಿನ್ – ಮೂಲತಃ ರಷ್ಯಾದವರು. ಆದ್ರೆ ಬೆಳೆದಿದ್ದು, ಆಡಿದ್ದು ಮಾತ್ರ ಫ್ರಾನ್ಸ್ ಪರ. 2008ರಲ್ಲಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದರು. 2009ರಲ್ಲಿ ಸ್ವಿಮ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದರು.
ವಿಕ್ಟೋರಿಯಾ ಅಝಾರೆಂಕಾ – ಬಲೆರಾಸ್ನ ಟೆನಿಸ್ ಆಟಗಾರ್ತಿ. ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಕೂಡ ವಿಕ್ಟೋರಿಯಾ ಅಝಾರೆಂಕೊ ಅವರು ಮುಡಿಗೇರಿಸಿಕೊಂಡಿದ್ದರು. ಬಿಡುವಿನ ವೇಳೆ ಬೀಚ್ನಲ್ಲಿ ಸ್ವಿಮ್ ಸೂಟ್ ಹಾಕೊಂಡು ಎಂಜಾಯ್ ಮಾಡುತ್ತಿದ್ದರು.

Victoria Azarenka saakshatv tennisಗಿಸೆಲಾ ಡುಲ್ಕೊ – ಅಜೆರ್ಂಟಿನಾದ ಟೆನಿಸ್ ಆಟಗಾರ್ತಿ. ಈಕೆ ಕೂಡ ಟೆನಿಸ್ ಮೈದಾನದಲ್ಲಿ ಅಷ್ಟೇನೂ ಸುದ್ದಿಯಾಗಿರಲಿಲ್ಲ. 2012ರಲ್ಲಿ ಟೆನಿಸ್ ಬದುಕಿಗೂ ವಿದಾಯ ಹೇಳಿದ್ದರು. ಆದ್ರೆ ತನ್ನ ಸೆಕ್ಸಿ ನೋಟದಿಂದಲೇ ಅಭಿಮಾನಿಗಳ ಮನ ಕದಿಯುತ್ತಿದ್ದ ಚೆಂದುಳ್ಳಿ ಆಟಗಾರ್ತಿ
ಮಾರ್ಟಿನಾ ಹಿಂಗೀಸ್ – ಸ್ವೀಜಲೆರ್ಂಡ್ನ ಸ್ಟಾರ್ ಟೆನಿಸ್ ಆಟಗಾರ್ತಿ. ಟೆನಿಸ್ ಅಂಗಣದ ರಾಣಿ ಎಂದೇ ಕರೆಯಲ್ಪಡುತ್ತಿದ್ದ ಮಾರ್ಟಿನಾ ಹಿಂಗೀಸ್ ಹಲವು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡು ವಿಶ್ವದ ನಂಬರ್ ವನ್ ಆಟಗಾರ್ತಿ ಕೂಡ ಆಗಿದ್ದರು. ಆಟದಷ್ಟೇ ತನ್ನ ಅಂದ ಚೆಂದದಿಂದಲೂ ಅಭಿಮಾನಿಗಳ ಮನ ಕದ್ದಿದ್ದರು.
ಲೌರಾ ರಾಬ್ಸನ್ – ಬ್ರಿಟಿಷ್ ಟೆನಿಸ್ ಆಟಗಾರ್ತಿ. 2012ರಲ್ಲಿ ಡಬ್ಲ್ಯೂಟಿಎ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು. ಈಕೆ ಕೂಡ ಸ್ವಿಮ್ ಸೂಟ್ ಮತ್ತು ತನ್ನ ಚೆಲುವಿನಿಂದಲೇ ಟೆನಿಸ್ ಲೋಕದಲ್ಲಿ ಸುದ್ದಿಯಾಗಿದ್ದರು

Caroline Wozniacki tennis saakshatvಎಲೆನಾ ಡೆಮಿಂಟಿವಾ – ರಷ್ಯಾದ ಟೆನಿಸ್ ಆಟಗಾರ್ತಿ. 2008ರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಈಕೆಗಿದೆ. ಸೆಕ್ಸಿ ನೋಟದಿಂದಲೇ ಅಭಿಮಾನಿಗಳ ಮನ ಕದಿಯುತ್ತಿದ್ದ ಎಲೆನಾ ಡೆಮಿಂಟಿವಾ ಕೂಡ ಹಾಟೆಸ್ಟ್ ಮಹಿಳಾ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಸ್ಟೆಫಿಗ್ರಾಫ್ – ಜರ್ಮನಿಯ ಎವರ್ ಗ್ರೀನ್ ಟೆನಿಸ್ ಆಟಗಾರ್ತಿ. 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಒಡತಿಯೂ ಹೌದು. ಹಲವು ವರ್ಷಗಳ ಕಾಲ ಮಹಿಳಾ ಟೆನಿಸ್ ಜಗತ್ತನ್ನು ಆಳಿದ ಸ್ಟೆಫಿಗ್ರಾಫ್, ಟೆನಿಸ್ ಅಂಗಣದಲ್ಲಿ ಸುದ್ದಿಯಾದಷ್ಟೇ ಟೆನಿಸ್ ಮೈದಾನದ ಹೊರಗಡೆಯೂ ಸುದ್ದಿಯಾಗಿದ್ದರು. ಬಿಕನಿ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ಸ್ಟೆಫಿಗ್ರಾಫ್ ಕೂಡ ವಿಶ್ವ ಟೆನಿಸ್ ನ ಹಾಟೆಸ್ಟ್ ಫೀಮೆಲ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd