The iconic thief-ಬೆಂಗಳೂರು: ಹೈ ಫೈ ಜೀವನಕ್ಕಾಗಿ ಈಗಿನ ಕಾಲೇಜು ಯುವಕರು ಯುವತಿಯರು, ಬೈಕ್, ಕಾರು, ಮೊಬೈಲ್ ಕಳ್ಳತನಕ್ಕೆ ಇಳಿದಿರುವ ಪ್ರಕರಣಗಳು ಒಂದಲ್ಲ ಒಂದು ಕಡೆ ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ.
ಆದರೆ ಇಲ್ಲಿ ವಿಚಿತ್ರ ಕಳ್ಳನೋಬ್ಬ ಇಂತಹದ್ದೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರ ಕೈವಶವಾಗಿದ್ದಾನೆ. ಹೈ ಫೈ ಜೀವನನಡೆಸಲು ಸಿಕ್ಕ ಸಿಕ್ಕವರ ಮನೆಗೆ ಕಳ್ಳತನ ಮಾಡುತ್ತಿದ್ದ ಈತ ಕದ್ದ ಹಣದಲ್ಲಿ ಬ್ರಾಂಡೆಂಡ್ ಬಟ್ಟೆ, ವಸ್ತುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ .
ನಂತರ ತನ್ನ ಬಳಿ ಉಳಿದಿದ್ದ ಹಣವನ್ನು ಇಟ್ಟುಕೊಳ್ಳದೇ ಚರ್ಚ್ ದೇವಾಲಯಗಳ ಉಂಡಿಗೆ ಹಾಕಿಬಿಡುತ್ತಿದ್ದ.ಮತ್ತೆ ಹಣದ ಅಗತ್ಯ ಇದ್ದಾಗ ಕಳ್ಳತನ ಮಾಡುತ್ತಿದ್ದ ಈ ವಿಚಿತ್ರ ಕಳ್ಳನನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಕಳ್ಳತನ ಮಾಡುವವರು ಸಾಮಾನ್ಯವಾಗಿ ಎಷ್ಟೇ ಹಣ ಕದ್ದರು ದೇವಸ್ಥಾನಗಳಿಗೆ ದಾನ ಕೊಡುವುದಿಲ್ಲಕದ್ದಿದ್ದರಲಿ ಒಂದು ರೂಪಾಯಿಯನ್ನು ಇನ್ನೊಬರಿಗೆ ಕೊಡಲು ಇಷ್ಟಪಡುವುದಿಲ್ಲ ಅಂತಹದ್ರಲ್ಲಿ ಈ ಕಳ್ಳ ಮಾತ್ರ ಕದ್ದ ಹಣದಿಂದ ತನ್ನೆಲ್ಲ ಆಸೆ ತೀರಿಸಿಕೊಂಡ ಮೇಲೆ ಉಳಿದ ಹಣ ದಾನ ಮಾಡುತ್ತಿದ್ದ ಈ ಕಳ್ಳನನ್ನುಜಾನ್ ಮೆಲ್ವಿನ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ವಿವಿಧ ಠಾಣೆಗಳಲ್ಲಿನ ಸಿಮಾರು 50ಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕದವನಾಗಿದ್ದಾನೆ. ಪ್ರತಿಸಲ ಕಳ್ಳತನ ಮಾಡಿದಾಗಲೂ, ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದ ಇವನೂ ಕೊನೆಗೆ ಮಡಿವಾಳ ಪೊಲೀಸರ ಕೈವಶವಾಗಿದ್ದಾನೆ ಇವನನ್ನು ಸದ್ಯ ಮಡಿವಾಳ ಪೊಲೀಸರು ಬಂಧಿಗೆ ಜೈಲಿಗೆ ಹಾಕಿದ್ದರೆ.








