ಅಚ್ಚರಿ ರೀತಿಯಲ್ಲಿ ಗಳಿಕೆ ಮಾಡಿದ The Kashmir Files
The Kashmir Files: 1989-90 ರ ದಶಕದಲ್ಲಿ ಕಾಶ್ಮೀರ ಪಂಡಿತರ ಮೇಲೆ ಆದ ದೌರ್ಜನ್ಯ, ಅತ್ಯಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನೈಜ ಘಟನೆಯಾದಾರಿತ ಚಿತ್ರವಾಗಿದೆ. ಈ ಚಿತ್ರವು ಸಾಕಷ್ಟು ಸುದ್ದಿಯಲ್ಲಿದ್ದು, ಚಿತ್ರದ ಕುರಿತು ಪರ-ವಿರೋಧದ ಮಾತು ಕೇಳಿ ಬರುತ್ತಿದೆ.
ಹೀಗಿರುವಾಗಲೇ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಗಳಿಕೆ ಮಾಡುತ್ತಿದೆ. ಹೌದು ಕಡಿಮೆ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದರು, ಗಳಿಕೆಯಲ್ಲಿ ಮಾತ್ರ ಅಚ್ಚರಿ ರೀತಿಯಲ್ಲಿ ಗಳಿಕೆ ಮಾಡಿದೆ. ಈ ಚಿತ್ರ ಅತೀ ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಬಜೆಟ್ ನ ಚಿತ್ರಗಳ ಬಾಕ್ಸ್ ಆಫೀಸ್ ವಿಚಾರದಲ್ಲಿ ದಾಖಲೆ ಬರೆದಿದೆ. ಕೇವಲ ಮೂರೇ ಮೂರು ವಾರಕ್ಕೆ ಇದರ ಗಳಿಕೆ 234.03 ಕೋಟಿ ಎಂದು ಅಂದಾಜಿಸಲಾಗಿದೆ. ಇಂಥದ್ದೊಂದು ಚಿತ್ರ ಈ ಪ್ರಮಾಣದಲ್ಲಿ ಹಣ ಮಾಡಿದ್ದು ಇದೇ ಮೊದಲು ಎನ್ನುತ್ತಾರೆ ಬಿಟೌನ್ ಹಣಕಾಸು ಪಂಡಿತರು.
#TheKashmirFiles [Week 3] Fri 4.50 cr, Sat 7.60 cr, Sun 8.75 cr, Mon 3.10 cr, Tue 2.75 cr. Total: ₹ 234.03 cr. #India biz. ALL TIME BLOCKBUSTER. pic.twitter.com/KCgOAZd0R9
— taran adarsh (@taran_adarsh) March 30, 2022
ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆದಾಗಿಂದ ಸಿನಿಮಾ ನಟ ನಟಿಯರು, ತಂತ್ರಜ್ಞರು ಮತ್ತು ರಾಜಕಾರಣಿಗಳು ಕೂಡ ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು, ಕೋಟಿ ಕೋಟಿ ಗಳಿಕೆಗೆ ಸಹಾಯ ಮಾಡಿದೆ. ಅಲ್ಲದೇ ಚಿತ್ರಕ್ಕಾಗಿ ಭಾರತ ಸರ್ಕಾರವು ಹಲವು ರಿಯಾಯಿತಿಗಳನ್ನು ಕೊಟ್ಟಿದ್ದು, ಸಿನಿಮಾ ನೋಡುವಂತೆ ಜನರಲ್ಲಿ ಪ್ರೋತ್ಸಾಹದ ಮಾತುಗಳನ್ನಾಡಿದೆ. ಇದೆಲ್ಲದ ಪರಿಣಾಮವಾಗಿ ಮೂರು ವಾರಕ್ಕೆ ಈ ಸಿನಿಮಾ 234.03 ಕೋಟಿ ಗಳಿಸಿ ಸಿನಿಮಾ ತಯಾರಕರಿಗೆ ಹುಮ್ಮಸ್ಸು ಹೆಚ್ಚಿಸಿದೆ.