Kashmir Files | ದಿ ಕಾಶ್ಮೀರ್ ಫೈಲ್ಸ್ ಮೂವಿ ಬಗ್ಗೆ ಆರ್ ಜಿವಿ ಹೇಳಿದ್ದೇನು..?
ಮಾರ್ಚ್ 11 ರಂದು ದೇಶಾದ್ಯಂತ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಮೂವಿ ಭರ್ಜರಿ ಯಶಸ್ಸು ಕಾಣುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಚಿತ್ರ ನೋಡಿ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮಾತ್ರವಲ್ಲ ಚಿತ್ರರಂಗದ ದಿಗ್ಗಜರು, ಹಲವು ಗಣ್ಯರು ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.
ಇದೀಗ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಸೆನ್ಸೇಷನಲ್ ಡೈರೆಕ್ಟರ್ ಆರ್ ಜಿವಿ ಕೂಡ ರಿವ್ಯೂ ಕೊಟ್ಟಿದ್ದಾರೆ.
ಈ ಸಿನಿಮಾ ನೋಡಿದ RGV ಟ್ವೀಟ್ ನಲ್ಲಿ, ‘ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರದ ಮೂಲಕ ಸ್ಫೋಟಕಗಳಿಗಿಂತ ಹೆಚ್ಚು ಫೈಯರ್ ಆಗಿದ್ದಾರೆ.
ಈ ಚಿತ್ರದ ಮೂಲಕ ಬಾಲಿವುಡ್ ನ ತುಳಿದು ವಿವೇಕ್ ವುಡ್ ಸ್ಥಾಪಿಸಿದ್ದಾರೆ. ವಿವೇಕ್ ಹೊಸ ಚಿತ್ರ ನಿರ್ಮಾಪಕರಿಗೆ ಸ್ಫೂರ್ತಿಯಾಗಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್‌ನ ಕಮರ್ಷಿಯಲ್ ಯಶಸ್ಸನ್ನು ಬದಿಗಿಟ್ಟರೇ, ಅದಕಿಂತ ದೊಡ್ಡ ಯಶಸ್ಸನ್ನು ಕಾಣುತ್ತಿದೆ ”ಎಂದು ಆರ್‌ಜಿವಿ ಶ್ಲಾಘಿಸಿದ್ದಾರೆ.
ಸದ್ಯ ಟ್ರೆಂಡ್ ಆಗಿರುವ ಈ ಸಿನಿಮಾದ ಬಗ್ಗೆ ಆರ್ ಜಿವಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.