ADVERTISEMENT
Friday, May 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೆನಿಸ್ ಲೋಕದ ನವರಸ ನಾಯಕ ನೊವಾಕ್ ಜಾಕೊವಿಕ್

admin by admin
June 14, 2021
in Newsbeat, Sports, ಕ್ರೀಡೆ
Serbia's Novak Djokovic saakshatv tennis french open
Share on FacebookShare on TwitterShare on WhatsappShare on Telegram

ಟೆನಿಸ್ ಲೋಕದ ನವರಸ ನಾಯಕ ನೊವಾಕ್ ಜಾಕೊವಿಕ್

Novak Djokovic french open 2021 saakshatvನೊವಾಕ್ ಜಾಕೊವಿಕ್… ಸದ್ಯ ವಿಶ್ವ ಟೆನಿಸ್ ನ ಸಾರ್ವಭೌಮ. ಪ್ರತಿಷ್ಠಿತ 2021ರ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 19ಕ್ಕೇರಿಸಿಕೊಂಡಿದ್ದಾರೆ.

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

May 14, 2026
NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

May 14, 2026

ವಿಶ್ವದ ನಂಬರ್ ವನ್ ಟೆನಿಸ್ ಆಟಗಾರನಾಗಿರುವ ನೊವಾಕ್ ಜಾಕೊವಿಕ್ 2016ರ ನಂತರ ಇದೀಗ ಎರಡನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 9 ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ವಿಂಬಲ್ಡನ್ ಮತ್ತು ಮೂರು ಬಾರಿ ಯುಎಸ್ ಓಪನ್ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸತತ 325 ವಾರಗಳ ತನಕ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಂಡ ಹೆಗ್ಗಳಿಕೆ ಕೂಡ ನೊವಾಕ್ ಜಾಕೊವಿಕ್ ಅವರಿಗಿದೆ.

Novak Djokovic french open 2021 saakshatvಹುಟ್ಟಿದ್ದು ಯುಗೊಸ್ಲೊವಿಯಾ… ಆದ್ರೆ ಬದುಕು ಕಟ್ಟಿಕೊಂಡಿದ್ದು ಸರ್ಬಿಯಾದಲ್ಲಿ. ವೃತ್ತಿಪರ ಟೆನಿಸ್ ಆಟಗಾರನಾಗಿದ್ರೂ ಜಾಕೊವಿಕ್ ಸಕಲ ಕಲಾವಲ್ಲಭ. ಆಟದ ಜತೆ ನವರಸಗಳನ್ನು ಮೈಗೂಡಿಸಿಕೊಂಡಿರುವ ಜಾಕೊವಿಕ್ ಲೈಪ್ ಅನ್ನು ಬಿಂದಾಸ್ ಆಗಿಯೇ ಎಂಜಾಯ್ ಮಾಡ್ತಾರೆ.

ಹೌದು, ಜಾಕೊವಿಕ್ ತುಂಬಾನೇ ತುಂಟ. ಆದ್ರೆ ಸ್ನೇಹ ಜೀವಿ. ಎಲ್ಲರ ಜತೆ ಬೆರೆಯುವ ಗುಣವಿತ್ತು. ಗೆಳೆಯರನ್ನು ಅಣಕಿಸುತ್ತಾ, ಮಿಮಿಕ್ರಿ ಮಾಡುತ್ತಾ, ಹಾಸ್ಯದ ಹೊನಲು ಹರಿಸುತ್ತಾ, ಮಾತಿನ ಚಟಾಕಿ ಹಾರಿಸುತ್ತಾ, ಮುಖ ಸಿಂಡರಿಸಿಕೊಳ್ಳುತ್ತಿರುವವರನ್ನು ನಗಿಸುತ್ತಾ, ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ಕಲೆ ಜಾಕೊವಕ್ ಅವರಿಗಿತ್ತು.

ಅಣ್ಣಂದಿರ ನೆರಳಿನಲ್ಲಿ ಟೆನಿಸ್ ಆಟದತ್ತ ಆಕರ್ಷಿತರಾಗಿದ್ದ ಜಾಕೋವಿಕ್ ಅವ್ರಲ್ಲಿ ಅಪ್ರತಿಮ ಪ್ರತಿಭೆ ಇತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲ ಹಾಗೇ ಜಾಕೊವಿಕ್ ನೋಡ ನೋಡುತ್ತಲೇ ಟೆನಿಸ್ ಆಟದ ಗ್ರಾಮರ್ ಗಳನ್ನು ಕಲಿತುಬಿಟ್ರು. ವಯಸ್ಸಿಗೂ ಮೀರಿದ ಸಾಧನೆ ಮಾಡಿ ಮುಂದೊಂದು ದಿನ ಟೆನಿಸ್ ಜಗತ್ತನ್ನು ರೂಲ್ ಮಾಡ್ತಾರೆ ಅನ್ನೋ ಸೂಚನೆಯನ್ನೂ ಕೊಟ್ಟಿದ್ರು.

Serbia's Novak Djokovic austrelian open 2021ಇದೆಲ್ಲಾದ್ರ ನಡುವೆ ತುಂಟಾಟ ಮಾಡುತ್ತಿದ್ದ ಜಾಕೊವಿಕ್ ಹೈಸ್ಕೂಲ್ ನಲ್ಲೇ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ರು. ಅಲ್ಲಿ ತನಕ ಕದ್ದುಮುಚ್ಚಿ ಓಡಾಡುತ್ತಿದ್ದ ಜಾಕೋವಿಕ್ 18ನೇ ವಯಸ್ಸಿನಲ್ಲಿ ಡೇಟಿಂಗ್ ಮಾಡಲು ಶುರು ಮಾಡಿದ್ರು. ಬಳಿಕ ನೇಮ್ ಫೇಮ್ ಬಂದ ನಂತರ ರಾಜರೋಷವಾಗಿ ತನ್ನ ಪ್ರೇಯಸಿ ಜತೆ ಓಡಾಡಿಕೊಂಡಿದ್ದ ಜಾಕೊವಿಕ್ ಪ್ರೀತಿಗೆ ಮಾತ್ರ ಕೈಕೊಡಲಿಲ್ಲ. ತನ್ನ ಯಶಸ್ಸಿನ ಹಿಂದೆ ಸ್ಪೂರ್ತಿಯ ಚಿಲುಮೆಯಾಗಿದ್ದ ಜೆಲೆನಾ ರಿಸ್ಟಿಕ್ ಜತೆ 2014ರಲ್ಲಿ ಮದುವೆಯಾದ್ರು.

ಆದ್ರೆ ಅದ್ಭುತ ಪ್ರತಿಭೆ ಜಾಕೊವಿಕ್ ಟೆನಿಸ್ ಅಂಗಣದಲ್ಲಿ ತುಂಬಾನೇ ಗಂಭೀರವಾಗಿರುತ್ತಿದ್ರು. ಅಭ್ಯಾಸದ ವೇಳೆಯಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಮೊದಲು ಟೆನಿಸ್ ಅಭ್ಯಾಸ… ಆಮೇಲೆ ಇನ್ನಿತರ ಚಟುವಟಿಕೆಗಳು. ಹೀಗೆ ಶಿಸ್ತುಬದ್ಧ ಜೀವನದಲ್ಲಿ ಸಾಗಿ ಬಂದ ಜಾಕೊವಿಕ್ ಗೆ ವೃತ್ತಿಪರ ಟೆನಿಸ್ ನಲ್ಲಿ ಯಶ ಸಾಧಿಸುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ.

ಅಂತಾರಾಷ್ಟ್ರೀಯ ಟೆನಿಸ್ ನ ಆರಂಭಿಕ ದಿನಗಳಲ್ಲಿ ರೋಜರ್ ಫೆಡರರ್, ರಫಾಲ್ ನಡಾಲ್, ಆಂಡಿ ಮುರೆಯಂತಹ ಘಟಾನುಘಟಿಗಳ ಸವಾಲನ್ನು ಎದುರಿಸಬೇಕಿತ್ತು. 2008ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ರೂ ಫೆಡರರ್, ನಡಾಲ್ ಆಟದ ಮುಂದೆ ಜಾಕೊವಿಕ್ ಮಂಕಾಗಿಬಿಟ್ಟಿದ್ರು.

ಆದ್ರೆ 2011ರ ನಂತರ ವಿಶ್ವ ಟೆನಿಸ್ ನಲ್ಲಿ ನೊವಾಕ್ ಜಾಕೊವಿಕ್ ಪ್ರಖರವಾಗಿ ಹೊಳೆಯಲು ಶುರು ಮಾಡಿದ್ರು. ಫೆಡರರ್, ನಡಾಲ್ ನಂತಹ ಅನುಭವಿ ಆಟಗಾರರಿಗೆ ನೀರು ಕುಡಿಸಿದ್ರು. ನೋಡ ನೋಡುತ್ತಲೇ ಗ್ರ್ಯಾಂಡ್ ಸ್ಲಾಂ, ಎಟಿಪಿ ಪ್ರಶಸ್ತಿಗಳನ್ನು ಗೆದ್ದುಕೊಂಡು ನಂಬರ್ ವನ್ ಸ್ಥಾನವನ್ನು ಅಲಂಕರಿಸಿದ್ರು.

ವೃತ್ತಿಪರ ಟೆನಿಸ್ ಗೆ ಎಂಟ್ರಿಯಾದ ಬಳಿಕ ಆರು ಮಂದಿ ಕೋಚ್ ಗಳ ಗರಡಿಯಲ್ಲಿ ಪಳಗಿರುವ ಜಾಕೊವಿಕ್ ಗೆ ಸದ್ಯ ಟೆನಿಸ್ ದಂತ ಕತೆ ಬೊರಿಸ್ ಬೇಕರ್ ಮಾರ್ಗದರ್ಶನ ನೀಡುತ್ತಿದ್ದಾರೆ.

Novak Djokovic  saakshatvಹಾಗಂತ ನೊವಾಕ್ ಜಾಕೊವಿಕ್ ದಿನವಿಡಿ ಟೆನಿಸ್ ಬಗ್ಗೆ ಯೋಚನೆ ಮಾಡುತ್ತಾರೆ ಅಂದ್ರೆ ನಿಮ್ಮ ಊಹೆ ತಪ್ಪಾಗುತ್ತದೆ. ಬದುಕನ್ನು ಹೇಗೆ ಎಲ್ಲಾ ಎಂಜಾಯ್ ಮಾಡಬಹುದು ಎಂಬುದನ್ನು ಜಾಕೊವಿಕ್ ಬಳಿ ಕಲಿಯಬೇಕು. ನಿಜ, ಜಾಕೊವಿಕ್ ಒಬ್ಬ ಪಕ್ಕಾ ಎಂಟೆಟೈನರ್. ಹಾಡುಗಾರ, ಹಾಸ್ಯಗಾರ, ನಿರೂಪಕನೂ ಹೌದು. ಬಿಡುವಿನ ವೇಳೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟಿವಿ ಚಾನೆಲ್ ಗಳಿಗೆ ಟಿಆರ್ ಪಿ ತಂದುಕೊಡಬಲ್ಲ ಸಾಮಥ್ರ್ಯ ಕೂಡ ಜಾಕೊವಿಕ್ ಅವರಿಗಿದೆ. ವಿವಿಧ ಚಾನೆಲ್ ಗಳಿಗೆ ಕಾರ್ಯಕ್ರಮ ನಿರೂಪಿಸುವ ಮಾತಿನ ಮೋಡಿಗಾರನೂ ಹೌದು.

ಅಷ್ಟೇ ಅಲ್ಲ, ಹಾಲಿವುಡ್ ಚಿತ್ರ ನಿರ್ಮಾಣ ಕೂಡ ಮಾಡಿದ್ದಾರೆ. ಜತೆಗೆ ರಿಯಲ್ ಎಸ್ಟೆಟ್ ಬಿಸಿನೆಸ್ ಜತೆ ಕ್ರೀಡಾ ಉದ್ಯಮವನ್ನು ಆರಂಭಿಸಿದ್ದಾರೆ. ಈಗಾಗಲೇ ನಾನಾ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವ ಸಮಾಜ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಹಾಗೇ ಜಾಕೊವಿಕ್ ಮೈದಾನದಲ್ಲೇ ಟೆನಿಸ್ ಅಭಿಮಾನಿಗಳಲ್ಲಿ ಪುಕ್ಕಟ್ಟೆ ಮನರಂಜನೆ ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಶರಪೆÇವಾ, ಸೆರೆನಾ ವಿಲಿಯಮ್ಸ್ ಸೇರಿದಂತೆ ತನ್ನ ಸಹ ಆಟಗಾರರು ಯಾವ ರೀತಿ ಮೈದಾನದಲ್ಲಿ ಆಡುತ್ತಾರೆ ಅನ್ನೋದನ್ನು ಅಣಕಿಸುವ ಪರಿಯನ್ನು ನೋಡುವುದೇ ಚೆಂದ.

ಒಟ್ಟಿನಲ್ಲಿ ಜಾಕೊವಿಕ್ ಅನ್ನೋ ಹೆಸರು ವಿಶ್ವ ಟೆನಿಸ್ ನಲ್ಲಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಹೆಸರು. ಬಹುತೇಕ ಟೆನಿಸ್ ಆಟಗಾರರು ಗಂಭೀರವಾಗಿರುತ್ತಾರೆ. ಆದ್ರೆ ಜಾಕೊವಿಕ್ ಹಾಗಲ್ಲ. ತಾನು ನಗುತ್ತಾ, ಅಭಿಮಾನಿಗಳನ್ನು ನಗಿಸುತ್ತಾ, ತಾನು ಆಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಾ ಟ್ರೋಫಿಗೆ ಚುಂಬಿಸುವ ರೀತಿಯೇ ಒಂಥಾರ ಖುಷಿ ಕೊಡುತ್ತೆ. ಏನೇ ಆಗ್ಲಿ, ಜಾಕೊವಿಕ್ ಅವ್ರ ಹಾವ -ಭಾವ, ಆಟ,- ನೋಟ, ಸ್ವಭಾವ- ವ್ಯಕ್ತಿತ್ವಕ್ಕೆ ಮನ ಸೋಲದವರೇ ಇಲ್ಲ..!

Tags: # Novak Djokovic#Rafael Nadal#Roger Federer#saakshatvAustralian OpenFrench OpenFrench Open 2021rainwezRoland GarrosSerbiaSportsStefanos TsitsipasTennisUS OpenWimbledon
ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

by Shwetha
May 14, 2026
0

ಬೆಂಗಳೂರು: ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ...

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

NEET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ..! ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯರ ಸಂಘಟನೆ

by Shwetha
May 14, 2026
0

ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ...

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

ಕೇಳದಿದ್ದರೆ ತಾಯಿ ಕೂಡ ಊಟ ನೀಡಲ್ಲ ಎಂದು ಮಂತ್ರಿಗಿರಿಗೆ ಪಟ್ಟು : ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾದ ಪ್ರದೀಪ್ ಈಶ್ವರ್

by Shwetha
May 14, 2026
0

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಇಂದು ವಿಧಾನಸೌಧದಲ್ಲಿ ತಮ್ಮ ರಾಜಕೀಯ ಆಕಾಂಕ್ಷೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಅತ್ಯಂತ ಪ್ರಭಾವಶಾಲಿ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳು...

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

ಬೆಳಗಾವಿ ಪಾಲಿಕೆಯಲ್ಲಿ ಗಡಿ ಕಾವು..! ಕನ್ನಡ–MES ಸದಸ್ಯರ ನಡುವೆ ಭಾರೀ ವಾಗ್ವಾದ

by Shwetha
May 14, 2026
0

ಬೆಳಗಾವಿ ಮಹಾನಗರ ಪಾಲಿಕೆ ಸಭೆ ಮತ್ತೆ ಗಡಿ ವಿವಾದದ ಕಾವು ಪಡೆದುಕೊಂಡಿತು. ಕನ್ನಡ ಪರ ಸದಸ್ಯರು ಮತ್ತು MES ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ವಾತಾವರಣ...

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

by Shwetha
May 14, 2026
0

ಕರ್ನಾಟಕ ರಾಜಕೀಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸರ್ಕಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram