ಬಳ್ಳಾರಿ : ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಒತ್ತಾಯಿಸಿ ಬಳ್ಳಾರಿಯ ಸುತ್ತಮುತ್ತಲ ತಾಂಡಾಗಳ ಜನರು, ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯೋ ಮೂಲಕ ಪತ್ರ ಚಳುವಳಿ ನಡೆಸಿದರು.
ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯ ಬಳಿ ಸೇರಿದ ಲಂಬಾಣಿ ಜನಾಂಗದವರು, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಎಸ್ಸಿ ಪಟ್ಟಿಯಲ್ಲೇ ಉಳಿಯಬೇಕು, ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ, ಡಾ.ಬಿಆರ್ ಅಂಬೇಡ್ಕರ್ ಅವರೇ ಈ ಜಾತಿಗಳನ್ನ ಎಸ್ಸಿ ಎಂದು ಗುರುತಿಸಿದ್ದಾರೆ. ಸದರಿ ಜಾತಿಗಳನ್ನು ಎಸ್ಸಿಯಿಂದ ಕೈಬಿಡಲಾಗಿದೆ ಎಂಬ ವದಂತಿ ಹಬ್ಬುತ್ತಿದೆ. ಸುಳ್ಳು ವದಂತಿಗಳನ್ನು ಹರಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಳ್ಳಾರಿಯ ಬೆಳಗಲ್ ತಾಂಡ, ಹೊನ್ನಳ್ಳಿ ತಾಂಡ, ಜಾನೆಕುಂಟೆ ತಾಂಡ, ಬೆಳಗಲ್ ಕ್ರಾಸ್ ನ ಭಾಗದ ಲಂಬಾಣಿ ಜನಾಂಗದವರು ಭಾಗಿಯಾಗಿ, ಪತ್ರ ಚಳುವಳಿ ನಡೆಸಿದರು.








