ನವದೆಹಲಿ: ವಿಶ್ವದ ಅತಿ ದೊಡ್ಡ ಕ್ಲೀನ್ ಎನರ್ಜಿ ಪ್ರಾಜೆಕ್ಟ್ ಸ್ಥಾಪಿಸುವುದಾಗಿ ಕಳೆದ ವರ್ಷ ಗುಜರಾತ್ ಶೃಂಗಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ (Gautam Adani) ಹೇಳಿದ್ದರು. ಸದ್ಯ ಈ ಹೇಳಿಕೆಗೆ ಜೀವ ಬಂದಂತಾಗಿದೆ.
ಆ ಸಂದರ್ಭದಲ್ಲಿ ಅವರು ಗುಜರಾತ್ ನಲ್ಲಿ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ ಮಾಡುವುದಾಗಿ ಕೂಡ ಹೇಳಿದ್ದರು. ಈಗ ಅದಾನಿ ಗ್ರೂಪ್ ಗುಜರಾತ್ನಲ್ಲಿ ಬೃಹತ್ ಕಾಪರ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆ ರಾಜ್ಯದ ಕಚ್ಛ್ ಜಿಲ್ಲೆಯ ಮುಂದ್ರಾ ಬಂದರು ನಗರಿಯಲ್ಲಿ ಈ ಘಟಕ ಆರಂಭವಾಗಲಿದ್ದು, 1.2 ಬಿಲಿಯನ್ ಡಾಲರ್ ಹೂಡಿಕೆಯಾಗುವ ನಿರೀಕ್ಷೆ ಇದೆ.