ಇತ್ತೀಚಿನ ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು..!
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಪರಿಷತ್ ಕಲಾಪದ ವೇಳೆ `ನೀಲಿಚಿತ್ರ’ ನೋಡಿದ್ರಾ `ಕೈ’ ಎಂಎಲ್ಸಿ ಪ್ರಕಾಶ್ ರಾಥೋಡ್..?
ಬೆಂಗಳೂರು: 2012ರ ಫೆಬ್ರವರಿ ವಿಧಾನಸಭೆಯಲ್ಲಿ ಅಂದಿನ ಬಿಜೆಪಿಯ ಸಚಿವರು, ಶಾಸಕರು ಬ್ಲೂಫಿಲಂ ನೋಡಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದರು. ಇಂದು ವಿಧಾನಪರಿಷತ್ನಲ್ಲಿ ಅಂತಹದ್ದೇ ಘಟನೆ ಮರುಕಳಿಸಿದೆ. ವಿಧಾನಪರಿಷತ್ನ ಹಿರಿಯ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಕಲಾಪದ ವೇಳೆ ಬ್ಲೂಫಿಲಂ ನೋಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. 2012ರಲ್ಲಿ ನಡೆದಿದ್ದ ಘಟನೆಯಿಂದ ಅಂದು ಸಚಿವರಾಗಿದ್ದ ಸಿ.ಸಿ ಪಾಟೀಲ್, ಇಂದಿನ ಡಿಸಿಎಂ ಹಾಗೂ ಸಚಿವ ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂಫಿಲಂ ನೋಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹಿರಿಯರ ವೇದಿಕೆ ಎಂದೇ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು `ನೀಲಿ ಚಿತ್ರ’ ನೋಡುವ ಮೂಲಕ ತಲೆತಗ್ಗಿಸುವಂತೆ ಮಾಡಿದ್ದಾರೆ.
ಸಚಿವ ಆರ್. ಶಂಕರ್ ವಿರುದ್ಧ ಸ್ಪೀಕರ್ ಕಾಗೇರಿ ಕೆಂಡಾಮಂಡಲವಾಗಿದ್ದೇಕೆ..?
ಬೆಂಗಳೂರು: ಪ್ರಶ್ನೋತ್ತರ ಕಲಾಪದ ವೇಳೆ ಹೇಳದೇ ಕೇಳದೇ ವಿಧಾನಸಭೆ ಕಲಾಪದಿಂದ ಹೊರಹೋಗಿದ್ದ ಸಚಿವ ಆರ್. ಶಂಕರ್ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಸಚಿವ ಆರ್. ಶಂಕರ್ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಉತ್ತರ ನೀಡಲು ಮುಂದಾಗಿದ್ದಾರೆ. ಸ್ವಲ್ಪ ಸಮಯದ ಹಿಂದೆ ಇದ್ದ ಸಚಿವರು ಹೇಳದೆ ಕೇಳದೆ ಹೋಗಿದ್ದು ಸ್ಪೀಕರ್ ಕಾಗೇರಿ ಕೆಂಡಾಮಂಡಲರಾಗುವಂತೆ ಮಾಡಿತು.
ಇದಕ್ಕೂ ಮೊದಲು ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಪರಿಚಯ ಮಾಡಿಕೊಡುವಾಗ ಸದನದಲ್ಲೇ ಇದ್ದ ಆರ್. ಶಂಕರ್, ಪ್ರಶ್ನೆಗೆ ಉತ್ತರಿಸುವಾಗ ಯಾರಿಗೂ ಹೇಳದೆ ಹೊರಗೆ ಹೋಗಿದ್ದರು.
ಪರಿಷತ್ ಗದ್ದಲ | ನೂತನ ಉಪಸಭಾಪತಿ ಪ್ರಾಣೇಶ್ ಹಲವರಿಗೆ ನಿರ್ಬಂಧಕ್ಕೆ ಶಿಫಾರಸು..!
ಬೆಂಗಳೂರು: ಕಳೆದ ಡಿಸೆಂಬರ್ 15ರಂದು ವಿಧಾನಪರಿಷತ್ನಲ್ಲಿ ನಡೆದ ಗಲಾಟೆ, ಉಪಸಭಾಪತಿಗಳನ್ನು ಎಳೆದಾಡಿ ನೂಕಾಟಕ್ಕೆ ಸಂಬಂಧಿಸಿದಂತೆ ನೂತನ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಪ್ರಾಣೇಶ್ ಸೇರಿದಂತೆ ಹಲವು ಸದಸ್ಯರನ್ನು ಕಲಾಪದಿಂದ ನಿರ್ಬಂಧಿಸುವಂತೆ ಶಿಫಾರಸು ಮಾಡಿರುವುದು ಮತ್ತೆ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಡಿ.15ರ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ನ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿಯ ಮಧ್ಯಂತರ ವರದಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಶಿಫಾರಸು ಮಾಡಿದೆ.
ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನ: ರಾಷ್ಟ್ರಪತಿ ಕೋವಿಂದ್ ಬೇಸರ
ನವದೆಹಲಿ: ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದು ವಿಷಾಧನೀಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದು ವಿಷಾಧನೀಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
`ನೀ ಬೆಂಗಳೂರಿನಲ್ಲಿರ್ತಿಯೋ..? ಪರಪ್ಪನ ಅಗ್ರಹಾರದಲ್ಲಿರ್ತಿಯೋ..’ ಬಿ.ವೈ ವಿಜಯೇಂದ್ರಗೆ ಡಿಚ್ಚಿ ಕೊಟ್ರಾ ಯತ್ನಾಳ್..!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಸಿಡಿ ಬಾಂಬ್ ಸಿಡಿಸಿದ್ದ ಬಿಜೆಪಿಯ ಮತ್ತೊಬ್ಬ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವೂ ಆಗಾಗ ಕಿಡಿಕಾರುತ್ತಲೇ ಬಂದಿದ್ದಾರೆ. ಸಂಪುಟ ವಿಸ್ತರಣೆ ವೇಳೆಯಂತೂ ಯತ್ನಾಳ್, ವಿಜಯೇಂದ್ರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದರು.
ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ : ಪ್ರಕಾಶ್ ರಾಥೋಡ್ ಸ್ಪಷ್ಟನೆ
ಬೆಂಗಳೂರು : ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಸ್ಪಷ್ಣನೆ ನೀಡಿದ್ದಾರೆ. ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಫೋಟೋಗಳನ್ನ ನೋಡಿದ್ದಾರೆ ಎಂಬ ಸುದ್ದಿ ಹರಿಡಾಡುತ್ತಿತ್ತು. ಈ ಬಗ್ಗೆ ಸ್ವತಃ ಪ್ರಕಾಶ್ ರಾಥೋಡ್ ಅವರು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel