ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಕಾನೂನು ಸತ್ತುಹೋಗಿದೆ – ಬಿಜೆಪಿ ನಾಯಕ ರಾಮ್ ಕದಂ
ಮುಂಬೈ: ನೌಕಾಪಡೆಯ ನಾವಿಕನೊಬ್ಬನನ್ನು ಅಪಹರಿಸಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಜಾರ್ಖಂಡ್ ಮೂಲದ ನೌಕಾಪಡೆಯ ನಾವಿಕ 27 ವರ್ಷದ ಸೂರಜ್ಕುಮಾರ್ ಮಿತಹಿಲೇಶ್ ದುಬೆಯನ್ನು ಕೆಲ ದುಷ್ಕರ್ಮಿಗಳು ಅಪಹರಿಸಿ ಪಲ್ಘರ್ ಪ್ರದೇಶದಲ್ಲಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆ ಹೈಕೋರ್ಟ್ ಮೊರೆ..!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ರಾಮ್ ಕದಂ ರಾಜ್ಯದಲ್ಲಿ ಸಾಧುಗಳಿಗೂ ಸುರಕ್ಷತೆ ಇಲ್ಲ, ಯೋಧರಿಗೂ ಇಲ್ಲ. ಯಾರಿಗೂ ರಕ್ಷಣೆಯಿಲ್ಲ. ಪಲ್ಘರ್ನಲ್ಲಿ ಮತ್ತೆ ದೇಶ ಸೇವೆ ಮಾಡುವ ಯೋಧರನ್ನು ಕೊಲ್ಲಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಕಾನೂನು ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಸಂಪ್ರದಾಯ, ಸಂಸ್ಕಂತಿಯನ್ನು ಕಾಪಾಡುವಂತಹ ಸಾಧುಗಳನ್ನು ಪಲ್ಘಾರ್ನಲ್ಲಿ 10 ತಿಂಗಳ ಹಿಂದೆ ಕ್ರೂರವಾಗಿ ಕೊಲ್ಲಲಾಗಿದೆ. ಇಡೀ ಸಾಧು ಸಮುದಾಯವೇ ಇದನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಆದರೆ ರಾಜ್ಯದಲ್ಲಿ ಕಾನೂನು ಸತ್ತುಹೋಗಿದೆ ಎಂದು ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel