ಪಾರ್ಟಿ ಬಳಿಕ ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ

1 min read
darawada saaksha tv

ಪಾರ್ಟಿ ಬಳಿಕ ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ kalaburagi saaksha tv

ಕಲಬುರಗಿ : ಹೊಸ ವರ್ಷದ ಪಾರ್ಟಿಯ ಬಳಿಕ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಕಲಬುರಗಿದ ತಾಜ್ ನಗರದಲ್ಲಿ ನಡೆದಿದೆ.

42 ವರ್ಷದ ಸೈಯದ್ ಗೌಸ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ತೆಲಂಗಾಣದ ಮೆಹಬೂಬ್ ನಗರದವ ಎಂದು ಗುರುತಿಸಲಾಗಿದೆ.

kalaburagi saaksha tv

ನಿನ್ನೆ ರಾತ್ರಿ ನ್ಯೂ ಇಯರ್ ಪಾರ್ಟಿ ಬಳಿಕ ಸ್ನೇಹಿತರ ಮಧ್ಯೆ ಜಗಳವಾಗಿದೆ. ಈ ಜಗಳ ತಾರಕ್ಕೇರಿ ಸೈಯದ್ ಗೌಸ್ ಕೊಲೆಯಲ್ಲಿ ಅಂತ್ಯವಾಗಿದೆ.  ಆದ್ರೆ ಕೊಲೆಗೆ ನಿಖರ ಕಾರಣ ತನಿಖೆ ಮೂಲಕವೇ ತಿಳಿದು ಬರಬೇಕಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪ್ರರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd